ಆಹಾರದ ರುಚಿ ಹೆಚ್ಚಿಸಲು ಸಾಸಿವೆ ಕರಿಬೇವಿನ ಒಗ್ಗರಣೆ ಹಾಕ್ತೇವೆ. ಆದರೆ ಈ ಕರಿಬೇವು ಚರ್ಮದ ಆರೈಕೆ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟು ಉಪಯುಕ್ತ ಎನ್ನುವ ಮಾಹಿತಿ ನಿಮಗೆ ಇದ್ಯಾ? ಇಲ್ಲಾದ್ರೆ ಈ ಲೇಖನ ಓದಿ.
ಮೊಡವೆ ಕಡಿಮೆ ಮಾಡುತ್ತೆ
ಕರಿಬೇವು ಎಲೆಗಳು ಹೆಚ್ಚುವರಿ ಎಣ್ಣೆಯನ್ನು ಕಡಿಮೆ ಮಾಡಲು ಮತ್ತು ಮುಚ್ಚಿಹೋಗಿರುವ ರಂಧ್ರಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮವು ನೈಸರ್ಗಿಕ ಹೊಳಪನ್ನು ಪಡೆಯುತ್ತದೆ.
ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತೆ
ಕರಿಬೇವಿನ ಎಲೆಗಳಲ್ಲಿರುವ ಸತು, ಮ್ಯಾಂಗನೀಸ್ ಮತ್ತು ವಿಟಮಿನ್ ಬಿ ಚರ್ಮವನ್ನು ಪೋಷಿಸುತ್ತದೆ ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ. ಕಣ್ಣು ಮತ್ತು ಹಣೆಯ ಸುತ್ತ ಸುಕ್ಕುಗಳು ಕಡಿಮೆಯಾಗುತ್ತವೆ.
ಎಣ್ಣೆಯುಕ್ತ ಚರ್ಮಕ್ಕೆ ಕರಿಬೇವಿನ ಎಲೆ
ಎಣ್ಣೆಯುಕ್ತ ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದು ಹಾಕಲು ಕರಿಬೇವು ಎಲೆಗಳು ಉಪಯುಕ್ತವಾಗಿವೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮದ ಇತರ ಸಮಸ್ಯೆಗಳನ್ನು ದೂರವಾಗಿಸುತ್ತವೆ.
ಕರಿಬೇವಿನ ಎಲೆಗಳನ್ನು ಅರಶಿನ, ಮುಲ್ತಾನಿಮಿಟ್ಟಿ ಜೊತೆಗೆ ಬೆರೆಸಿ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. 10-15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಈ ಪರಿಹಾರವು ಚರ್ಮವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.