ಹೊಸದಿಗಂತ ವರದಿ ವಿಜಯಪುರ:
ನಾನು ಈಗಲೂ ರಾಜೀನಾಮೆಗೆ ಸಿದ್ಧನಿದ್ದೇನೆ, ಅವತ್ತೂ ಸಿದ್ದನಿದ್ದೆ. ಬ್ಲ್ಯಾಂಕ್ ಸಹಿ ಮಾಡಿ ಕೊಡುವೆ ನೀವೇ ತಗೊಂಡು ಹೋಗಿ ಕೊಡಿ ಎಂದು ಜವಳಿ, ಸಕ್ಕರೆ, ಎಪಿಎಂಸಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಶಾಸಕ ಯತ್ನಾಳ್ ಗೆ ಸವಾಲ್ ಹಾಕಿದರು.
ಯತ್ನಾಳ್ ಹಾಗೂ ಶಿವಾನಂದ ಪಾಟೀಲ ಮಧ್ಯೆ ವಾಗ್ವಾದ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿ, ನಾನು ಈಗಾಗಲೇ ಸ್ಪಷ್ಟೀಕರಣ ನೀಡಿರುವೆ. ನನ್ನ ಉದ್ದೇಶ ತಿಳಿಸಿರುವೆ. ಟೆಕ್ನಿಕಲಿ ರಾಜೀನಾಮೆ ರಾಂಗ್ ಇರಬಹುದು ಎಂದು ವಾದ ಮಾಡುತ್ತಿದ್ದಿರಿ ಎಂದು ದೂರಿದರು.
ಯತ್ನಾಳ್ ವಿರುದ್ಧ ಅಲ್ಪಸಂಖ್ಯಾತ ಹೋರಾಟದಲ್ಲಿ ಸಚಿವ ಎಂ.ಬಿ. ಪಾಟೀಲ ಭಾಗಿಯಾಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಎಲ್ಲೇ ಇದ್ದರೂ ಆ ವ್ಯಕ್ತಿಯ ಹೆಸರು ನಾನು ಪ್ರಸ್ತಾಪ ಮಾಡಿಲ್ಲ. ಖಾಸಗಿ ವಾಹಿನಿಯವರು ಕೇಳಿದಾಗ ಹೇಳಿರುವ ಅವರು ಆ ಕಾರ್ಯಕ್ರಮದಲ್ಲಿ ಇರಲೂ ಇಲ್ಲ ಅದು ಸತ್ಯವಿದೆ ಎಂದರು.
ರಾಜೀನಾಮೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮೊಂದಿಗೆ ಮಾತನಾಡಿದ್ದಾರೆ ಎಂಬ ವಿಚಾರಕ್ಕೆ, ಅವರು ರಾಜೀನಾಮೆ ವಿಚಾರವಾಗಿ ಮಾತನಾಡೇ ಇಲ್ಲ. ಕೆಲ ಸಕ್ಕರೆ ಕಾರ್ಖಾನೆ ವಿಚಾರದ ಸಮಸ್ಯೆ ಇತ್ತು. ಅದನ್ನು ಮಾತ್ರ ಮಾತನಾಡಿದ್ದಾರೆ. ಬೇರೆ ವಿಚಾರ ಮಾತನಾಡಿಲ್ಲ ಎಂದರು.
ಪಾಕಿಸ್ತಾನದೊಂದಿಗೆ ಯುದ್ದವಾದರೆ ತಪ್ಪಿಲ್ಲ. ಈ ವಿಚಾರವಾಗಿ ದೇಶದ ಎಲ್ಲ ಪಕ್ಷಗಳು, ದೇಶದ ಜನರು ಸಹಿತ ಬೆಂಬಲಿಸಿವೆ. ಯುದ್ಧ ಆಗಲೇ ಬೇಕಲ್ಲ, ಕುಹಕ ಬುದ್ದಿ ನಿಲ್ಲಿಸಬೇಕು ಎಂದರೆ ಯುದ್ಧ ಆಗಲೇ ಬೇಕು ಎಂದರು.
ಈ ವಿಚಾರವಾಗಿ ಎಲ್ಲ ಸರ್ಕಾರ ಬೆಂಬಲಿಸುತ್ತಿವೆ. ದೇಶದ ಜನರೇ ಸರ್ಕಾರದ ಜೊತೆಗೆ ಇರುತ್ತಾರೆ ಎಂದರು.
ಮಹಾರಾಷ್ಟ್ರ ಸರ್ಕಾರದಿಂದ ರಾಜ್ಯಕ್ಕೆ ನೀರು ಬಿಡಬೇಕು ಎಂದು ಸಿಎಂ ಪತ್ರ ಬರೆದಿದ್ದಾರೆ ಎಂಬ ವಿಚಾರ ಬಗ್ಗೆ, ಪ್ರತಿ ವರ್ಷ ಅವರು ನಮಗೆ ನೀರು ಬಿಡಬೇಕು, ನಾವು ಬೇರೆಯವರಿಗೆ ಬಿಡಬೇಕು. ನೀರು ಎಲ್ಲರಿಗೂ ಅಷ್ಟೇ. ಹೆಚ್ಚಿದ್ದರೆ ಬಿಡಬೇಕು ಎಂದರು.
ಪ್ರತಿ ವರ್ಷಾ ಅವರು ನೀರು ದುಡ್ಡು ತಗೊಂಡಾದರೂ ಕೊಡುತ್ತಿದ್ದರು, ಇಲ್ಲ ಬಾಂಧವ್ಯದ ಮೇಲಾದರೂ ಕೊಡುತ್ತಿದ್ದರು. ಬಿಡಬೇಕು ಎಂಬುದು ಸಾಮಾನ್ಯ ಪರಿಜ್ಞಾನ. ನೋಡೋಣ ಏನಾಗುತ್ತೆ ಎಂಬುದು ಎಂದರು.