ʼಭಾರತ ಯಾವುದನ್ನೂ ಮರೆಯೋದಿಲ್ಲ, ಭಾರತ ಯಾವುದನ್ನೂ ಕ್ಷಮಿಸೋದು ಇಲ್ಲʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರರ ಅಡಗು ತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ.ಇದಕ್ಕೆ ನಟ ಸುದೀಪ್‌ ಟ್ವೀಟ್‌ ಮೂಲಕ ನಮಗೆ ನ್ಯಾಯ ಸಿಕ್ಕಿದೆ ಎಂದು ಹೇಳಿದ್ದಾರೆ.

ಓರ್ವ ಭಾರತೀಯನಾಗಿ, ಈ ಪವಿತ್ರ ಭೂಮಿಯ ಮಗನಾಗಿ ಹಲ್ಗಾಮ್‌ನಲ್ಲಿ ನಡೆದ ಘಟನೆ ನನಗೆ ನೋವನ್ನು ತಂದಿತ್ತು. ಇಂದು ನನಗೆ ನ್ಯಾಯ ಸಿಕ್ಕಂತೆ ಅನಿಸುತ್ತಿದೆ. ಆಪರೇಷನ್ ಸಿಂಧೂರ: ಕೇವಲ ಒಂದು ಧ್ಯೇಯವಲ್ಲ, ಬದಲಾಗಿ ಒಂದು ಪವಿತ್ರ ಪ್ರತಿಜ್ಞೆ’ ಎಂದು ಸುದೀಪ್ ಹೇಳಿದ್ದಾರೆ.

ಭಾರತದ ಸಿಂಧೂರ ಮತ್ತೆ ನಮಗೆ ಸಿಕ್ಕಿದೆ. ನಮ್ಮ ಧೈರ್ಯಶಾಲಿಗಳು ಸಿಂಧೂರದ ಗೌರವವನ್ನು ಬೆಂಕಿ ಮತ್ತು ನಿಖರತೆಯೊಂದಿಗೆ ಮತ್ತೆ ತಂದಿದ್ದಾರೆ. ನಮ್ಮ ಸಶಸ್ತ್ರ ಪಡೆಗಳಿಗೆ ಅನಂತ ವಂದನೆಗಳು. ದೃಢವಾಗಿ ಮತ್ತು ನಿರ್ಭೀತವಾಗಿ ನಿಂತ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದ. ಭಾರತ ಮರೆಯುವುದಿಲ್ಲ, ಭಾರತ ಕ್ಷಮಿಸುವುದಿಲ್ಲ’ ಎಂದು ಸುದೀಪ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!