ಹೊಸದಿಗಂತ ಡಿಜಿಟಲ್ ಡೆಸ್ಕ್:
IPL ನಿಂದ RCB ತಂಡದ ಆಟಗಾರ ದೇವದತ್ ಪಡಿಕ್ಕಲ್ ಹೊರಬಿದ್ದಿದ್ದಾರೆ. ಬಲ ಮಂಡಿ ಗಾಯಕ್ಕೆ ಒಳಗಾಗಿರುವ ಪಡಿಕ್ಕಲ್ ಅವರು ಆರ್ಸಿಬಿ ತಂಡದ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದೀಗ ಅವರ ಬದಲಿಗೆ ಯಾರು ಬಂದಿದ್ದಾರೆ ಗೊತ್ತಾ?
ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್ ತಂಡದಿಂದ ಹೊರನಡೆದಿದ್ದು, ಇದೀಗ ಅವರ ಜಾಗಕ್ಕೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.
ಮಯಾಂಕ್ ಅಗರ್ವಾಲ್ 12 ವರ್ಷಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. ಅದರಲ್ಲೂ ಅವರು ಐಪಿಎಲ್ ಕೆರಿಯರ್ ಆರಂಭಿಸಿದ್ದು ಆರ್ಸಿಬಿ ಮೂಲಕ ಎಂಬುದು ವಿಶೇಷ. 2011 ರಲ್ಲಿ ಮಯಾಂಕ್ ಅಗರ್ವಾಲ್ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. ಮೊದಲ ಸೀಸನ್ನಲ್ಲಿ 8 ಪಂದ್ಯಗಳನ್ನಾಡಿದ್ದ ಮಯಾಂಕ್ 141 ರನ್ ಕಲೆಹಾಕಿದ್ದರು. ಅವರು 2012, 2013 ರಲ್ಲೂ ಆರ್ಸಿಬಿ ಪರ ಆಡಿದ್ದರು.
2013 ರಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪರಿಣಾಮ ಮಯಾಂಕ್ ಅಗರ್ವಾಲ್ ಅವರನ್ನು ಆರ್ಸಿಬಿ ತಂಡದಿಂದ ಕೈ ಬಿಡಲಾಗಿತ್ತು. 2023 ಹಾಗೂ 2024 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಕಾಣಿಸಿಕೊಂಡಿದ್ದರು. ಇದೀಗ ಬದಲಿ ಆಟಗಾರನಾಗಿ ಆರ್ಸಿಬಿ ತಂಡಕ್ಕೆ ರಿಎಂಟ್ರೆ ಕೊಟ್ಟಿದ್ದಾರೆ.