ಮಹಿ ಫ್ಯಾನ್ಸ್ ಗೆ ಸಿಕ್ತು ಕ್ಲಾರಿಫಿಕೇಷನ್.. ನಿವೃತ್ತಿ ಬಗ್ಗೆ ಕಡೆಗೂ ಮೌನ ಮುರಿದ ಧೋನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

IPL ​ನ 57ನೇ ಪಂದ್ಯದಲ್ಲಿ KKR ವಿರುದ್ಧ CSK ತಂಡ ಜಯ ಸಾಧಿಸಿದೆ. ಅದು ಕೂಡ ಸತತ 4 ಸೋಲುಗಳ ಬಳಿಕ. ಈ ಬಾರಿಯ ಐಪಿಎಲ್​ನಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡುತ್ತಿರುವ ಸಿಎಸ್​ಕೆ ತಂಡವು 12 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 3 ಮ್ಯಾಚ್​ಗಳಲ್ಲಿ ಮಾತ್ರ.

ಈ ಬಳಿಕ ಮಾತನಾಡಿದ ಧೋನಿ, ನಿವೃತ್ತಿ ಅಂಚಿನಲ್ಲಿರುವುದನ್ನು ಬಹಿರಂಗಪಡಿಸಿದ್ದಾರೆ. ಆದರೆ ಅದು ಸದ್ಯಕ್ಕಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈಗ ನನಗೆ 43 ವರ್ಷ. ಇದನ್ನು ನೀವು ಮರೆಯಬೇಡಿ, ಅಭಿಮಾನಿಗಳಿಂದ ನನಗೆ ಯಾವಾಗಲೂ ಪ್ರೀತಿ ಮತ್ತು ವಾತ್ಸಲ್ಯ ಸಿಕ್ಕಿದೆ. ಹೀಗಾಗಿ ನಾನು ಬಹಳ ಸಮಯದಿಂದ ಆಡುತ್ತಿದ್ದೇನೆ. ಇದಾಗ್ಯೂ ನನಗೆ 43 ವರ್ಷವಾಗಿದೆ ಎಂಬುದು ಅಭಿಮಾನಿಗಳಿಗೆ ಗೊತ್ತಿರಲಿ. ಅವರಲ್ಲಿ ಹಲವರಿಗೆ ನನ್ನ ಕೊನೆಯ ಪಂದ್ಯ ಯಾವಾಗ ಎಂದು ತಿಳಿದಿಲ್ಲ. ಹೀಗಾಗಿಯೇ ಅವರು ನನ್ನ ಆಟವನ್ನು ನೋಡಲು ಬಯಸುತ್ತಿದ್ದಾರೆ. ಈ ಐಪಿಎಲ್ ಮುಗಿದ ನಂತರ, ನನ್ನ ದೇಹವು ಈ ಒತ್ತಡವನ್ನು ತಡೆದುಕೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ನಾನು ಇನ್ನೂ ಆರರಿಂದ ಎಂಟು ತಿಂಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಧೋನಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!