ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ನಡೆಸಿದ ‘ಆಪರೇಷನ್ ಸಿಂದೂರ’ದಲ್ಲಿ ಕ್ಷಿಪಣಿಗಳ ದಾಳಿ ಮಾಡಿ ಪಾಕಿಸ್ತಾನದಲ್ಲಿನ 9 ಉಗ್ರ ನೆಲೆಗಳನ್ನು ಧ್ವಂಸ ಮಾಡಲಾಯಿತು. ಈ ಘಟನೆ ಬಗ್ಗೆ ಪಾಕಿಸ್ತಾನೀ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿರುವುದು ಇದೀಗ ವೈರಲ್ ಆಗಿದೆ.
“ಭಾರತ 24 ಮಿಸೈಲ್ ಗಳನ್ನ ಪಾಕಿಸ್ತಾನದ ಮೇಲೆ ಹಾಕಿದೆ. ಬೇಸರದ ಸಂಗತಿ ಎಂದರೆ ಪಾಕಿಸ್ತಾನದ ಡಿಫೆನ್ಸ್ ಸಿಸ್ಟಂ ಒಂದೇ ಒಂದು ಕ್ಷಿಪಣಿಯನ್ನೂ ತಡೆಯಲಿಲ್ಲ… ನುಗ್ಗಿ ಹೊಡೀತೀವಿ ಎಂದು ಭಾರತದವ್ರು ಹೇಳುತ್ತಿದ್ರು. ಹಾಗೇ ಹೊಡೆದಿದ್ದಾರೆ. ಭಾರತ ದಾಳಿ ಮಾಡಿರೋದು ಅವರ ಟಾರ್ಗೆಟ್ಗಳ ಮೇಲೆ ಮಾತ್ರ. ಬೇರೆ ಕಡೆ ದಾಳಿ ಮಾಡಿದ್ರೆ ಅದೆಷ್ಟು ಜನ ಸಾಯ್ತಿದ್ರೊ ಗೊತ್ತಿಲ್ಲ. ಭಾರತದ ಜೆಟ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳಲ್ಲಿ ಹೇಳಲಾಗ್ತಿದೆ. ಆ ರೀತಿ ಯಾವ ಘಟನೆಯೂ ಪಾಕಿಸ್ತಾನ ಮಾಡಿಲ್ಲ. ಪಾಕಿಸ್ತಾನ ಮೀಡಿಯಾದಲ್ಲಿ ಬರ್ತಿರೋದು ಒಂದು ವರ್ಷದ ಹಳೆ ವೀಡಿಯೋಗಳು. ನಾವು ಈ ಸತ್ಯವನ್ನ ಒಪ್ಪಿಕೊಳ್ಳಬೇಕು” ಎಂದು ಪಾಕ್ ವಿಡಿಯೋ ಮೂಲಕ ಸತ್ಯ ಸಂಗತಿ ತಿಳಿಸಿದ್ದಾರೆ.
India fired 24 missiles in a precision target attack, each one of those missiles hit the target. Pakistan was unable to intercept any.
Listen to this Pakistani’s confession and hail the professionalism of #IndianArmy #OperationSindoor pic.twitter.com/Zh5ItGUwQM
— Anti Propaganda Front (@apf_ind) May 8, 2025