CINE | ಯುದ್ಧದ ವಾತಾವರಣದಿಂದ ಬಿಗ್‌ ಚೇಂಜ್‌ ಮಾಡಿದ ‘ಭೂಲ್ ಚುಕ್ ಮಾಫ್ʼ ಟೀಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದಲ್ಲಿ ಯುದ್ಧದ ವಾತಾಔರಣ ನಿರ್ಮಾಣವಾಗಿದ್ದು, ಬಾಲಿವುಡ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಬೇಕಿದ್ದ ಸಿನಿಮಾವೊಂದು ಒಟಿಟಿಯಲ್ಲಿ ಬಿಡುಗಡೆ ಮಾಡಲಿದೆ.

ಹೌದು, ರಾಜ್‌ಕುಮಾರ್‌ ರಾವ್‌ ಹಾಗೂ ವಮಿಕಾ ಗಬ್ಬಿ ಅಭಿನಯದ ಭೂಲ್‌ ಚುಕ್‌ ಮಾಫ್‌ ಸಿನಿಮಾ ನಾಳೆ ರಿಲೀಸ್‌ ಆಗಬೇಕಿತ್ತು. ಆದರೆ ದೇಶದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಸಿನಿಮಾ ರಿಲೀಸ್‌ ಮುಂದಕ್ಕೆ ಹಾಕಿದೆ.

ಅದರಲ್ಲಿಯೂ ಥಿಯೇಟರ್ಸ್‌ ಅಲ್ಲದೇ ಸಿನಿಮಾ ಅಮೇಝಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆಗಲಿದೆ. ಮೇ 16 ರಿಂದ ಅಮೆಜಾನ್ ಪ್ರೈಂನಲ್ಲಿ ‘ಭೂಲ್ ಚುಕ್ ಮಾಫ್’ ಸಿನಿಮಾ ಬಿಡುಗಡೆ ಆಗಲಿದೆ’ ಎಂದಿದ್ದಾರೆ.

‘ಭೂಲ್ ಚುಕ್ ಮಾಫ್’ ಸಿನಿಮಾವನ್ನು ಚಿತ್ರಮಂದಿರಗಳಿಗಾಗಿ ನಿರ್ಮಾಣ ಮಾಡಲಾಗಿತ್ತು, ಪ್ರೇಕ್ಷಕರೊಂದಿಗೆ ಚಿತ್ರಮಂದಿರದಲ್ಲಿ ಈ ಸಿನಿಮಾದ ಬಿಡುಗಡೆಯನ್ನು ಸಂಭ್ರಮಿಸಲು ನಾವು ಉತ್ಸುಕರಾಗಿದ್ದೆವು. ಆದರೆ ನಮಗೆ ದೇಶದ ಹಿತ, ನಾಗರೀಕರ ಸುರಕ್ಷೆಯೆ ಮೊದಲ ಪ್ರಾಧಾನ್ಯತೆ ಹೀಗಾಗಿ ನಾವು ಈ ಸಿನಿಮಾವನ್ನು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದಿದೆ ನಿರ್ಮಾಣ ಸಂಸ್ಥೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!