ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸೇನಾ ನೆಲೆಗಳನ್ನು ಗುರಿಯಾಗಿರಿಸಿ ಕ್ಷಿಪಣಿ ದಾಳಿ ನಡೆಸಿದ ಪಾಕ್ಗೆ ಭಾರತ ನೀಡಿದ ‘ಸುದರ್ಶನ ಚಕ್ರ’ ಮೂಲಕ ತಿರುಗೇಟು ನೀಡಿದ್ದು, ಎಲ್ಲಾ ಕ್ಷಿಪಣಿಗಳನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಿದೆ.
ಇದೇ ಸಂದರ್ಭ ಪಾಕಿಸ್ತಾನದ ಚೀನಾ ನಿರ್ಮಿತ ಎಚ್ಕ್ಯು 16 ಎಡಿಎಸ್ ಸಿಸ್ಟಮ್ ಕೂಡಾ ಸಂಪೂರ್ಣವಾಗಿ ಧ್ವಂಸವಾಗಿದೆ.
ಭಾರತ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಮೇಲೆ ಸುದರ್ಶನ ಚಕ್ರ ಪ್ರಯೋಗಿಸಿದೆ. ಅಸಲಿಗೆ ಇದು ರಷ್ಯಾ ನಿರ್ಮಿತ ಏರ್ ಡಿಫೆನ್ಸ್ ವ್ಯವಸ್ಥೆಯಾದ ಎಸ್-400 ಆಗಿದ್ದು, ಇದಕ್ಕೆ ಭಾರತೀಯ ಸೇನೆ ಸುದರ್ಶನ ಚಕ್ರ ಎಂದು ನಾಮಕರಣ ಮಾಡಿದೆ.
ಭಾರತ ನಡೆಸಿದ ಆಪರೇಷನ್ ಸಿಂದೂರ ಪಾಕ್ಗೆ ಮರ್ಮಾಘಾತ ನೀಡಿದ ಬೆನ್ನಿಗೇ ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ನಿನ್ನೆ ಸಂಜೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಾಗರಿಕರ ಮೇಲೆ ಶೆಲ್ ದಾಳಿ ನಡೆಸಿ 16ಮಂದಿಯನ್ನು ಬಲಿ ಪಡೆದಿತ್ತು. ಅಲ್ಲದೆ, ಭಾರತದ 15 ನಗರಗಳ ಮೇಲೆ ಡ್ರೋನ್, ಕ್ಷಿಪಣಿ ದಾಳಿಗೆ ತಂತ್ರ ರೂಪಿಸಿತ್ತು. ಭಾರತೀಯ ಸೇನೆ ಇವೆಲ್ಲ ಕುತಂತ್ರಗಳನ್ನು ಬಗ್ಗುಬಡಿದು ಮತ್ತೆ ಪಾಕಿಸ್ತಾನದೊಳಗೆ ನುಗ್ಗಿ ಎಲ್ಲಾ ದಾಳಿಯನ್ನು ವಿಫಲಗೊಳಿಸಿದೆ. ಈ ಮೂಲಕ ಆಪರೇಷನ್ ಸಿಂಧೂರವನ್ನು ಮುಂದುವರಿಸಿದೆ. ಪಾಕಿಸ್ತಾನದ ಲಾಹೋರ್, ಕರಾಚಿ, ಸಿಯೋಲ್ ಕೋಟ್ ಮೇಲೆ ಕೂಡಾ ಭಾರತ ದಾಳಿ ನಡೆಸಿದೆ.