LATEST UPDATE | ಕ್ಷಿಪಣಿಗಳ ಬೆನ್ನಲ್ಲೇ ಪಾಕ್ ನ ಮೂರು ಫೈಟರ್ ಜೆಟ್ ವಿಮಾನಗಳನ್ನು ಹೊಡೆದುರುಳಿಸಿದ ಭಾರತದ ಸೇನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮುವಿನ ಮೇಲೆ ಪಾಕಿಸ್ತಾನ ಹಾರಿಸಿದ ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿ ಪ್ರತ್ಯುತ್ತರ ನೀಡಿದ್ದು , ಇದರ ಬೆನ್ನಲ್ಲೇ ಪಾಕಿಸ್ತಾನದ ಮೂರು ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದೆ.

ಅಮೆರಿಕದಿಂದ ಖರೀದಿ ಮಾಡಿದ್ದ ಪಾಕಿಸ್ತಾನದ ಫೈಟರ್​ ಜೆಟ್​ ಎಫ್​-16 ಅನ್ನು ಭಾರತದ ಬಲಿಷ್ಠ ವಾಯು ಸೇನೆ ಹೊಡೆದುರಳಿಸಿದೆ.

ಜಮ್ಮುವಿನಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದವು. ನಂತರ ಸೈರನ್‌ಗಳ ಕೂಗು ಕೇಳಿಬಂತು. ತಕ್ಷಣ ವಿದ್ಯುತ್‌ ಕಡಿತವಾಯಿತು. ದಾಳಿ ಇನ್ನೂ ಮುಂದುವರಿದಿದೆ. ಪರಿಣಾಮವಾಗಿ ಸೆಲ್‌ಫೋನ್‌ ಸೇವೆ ಸ್ಥಗಿತಗೊಂಡಿದೆ.ಪಂಜಾಬ್‌ನ ಹತ್ತಿರದ ಪಟ್ಟಣವಾದ ಗುರುದಾಸ್ಪುರದಲ್ಲಿ ಬ್ಲ್ಯಾಕೌಟ್ ಘೋಷಿಸಲಾಯಿತು

6 ಕಡೆಗಳಲ್ಲಿ ಡ್ರೋನ್‌ ದಾಳಿಗೆ ಪಾಕ್‌ ಯತ್ನಿಸಿದೆ. ಚನಿ ಹಿಮತ್‌, ಆರ್‌ಎಸ್‌ ಪುರ, ಜಮ್ಮುವಿನಲ್ಲಿ ಡ್ರೋನ್‌ ದಾಳಿ ನಡೆಸಲಾಗಿದೆ. ಆದ್ರೆ ಇದನ್ನೆಲ್ಲ ಸೇನೆ ಹೊಡೆದುರುಳಿಸಿದೆ. ಸದ್ಯ ಜಮ್ಮುವಿನಾದ್ಯಂತ ವಾಯು ದಾಳಿ ಸೈರನ್‌ ಮೊಳಗಿದೆ.

ಎಫ್​- 16 ಹೆಸರಿನ ಒಂದು ಫೈಟರ್ ಜೆಟ್​ ಹಾಗೂ ಜೆಎಫ್​-17 ಹೆಸರಿನ ಎರಡು ಯುದ್ಧ ವಿಮಾನಗಳನ್ನು ಭಾರತದ ವಾಯು ಸೇನೆ ನೆಲಕ್ಕುರುಳಿಸಿದೆ. ಇದರಿಂದ ಪಾಕಿಸ್ತಾನಕ್ಕೆ ಮತ್ತೆ ಭಾರೀ ಪೆಟ್ಟು ಬಿದ್ದಂತೆ ಆಗಿದೆ.

ಭಾರತೀಯ ಸೇನಾಪಡೆಗಳು ಪಾಕ್ ದಾಳಿಯನ್ನು ಸಮರ್ಥವಾಗಿ ಎದುರಿಸಿವೆ. ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಬಳಸಿ ಪಾಕ್ ಡ್ರೋನ್ ಗಳನ್ನು ಭಾರತೀಯ ಸೇನೆ ಆಕಾಶದಲ್ಲೇ ಹೊಡೆದುರುಳಿಸಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!