HEALTH | ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ!

ಅಧಿಕ ಕೊಲೆಸ್ಟ್ರಾಲ್ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಒಂದು ಮೂಕ ಅಪಾಯವಾಗಿದೆ. ಗಮನಾರ್ಹ ರೋಗಲಕ್ಷಣಗಳ ಕೊರತೆಯ ಹೊರತಾಗಿಯೂ, ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಗಳು ಒಬ್ಬರ ಆರೋಗ್ಯದ ಮೇಲೆ ಆಳವಾದ ಪರಿಣಾಮಗಳನ್ನು ಬೀರಬಹುದು. ಇವತ್ತು ನಾವು ಈ ಕೊಲೆಸ್ಟ್ರಾಲ್ ಹೆಚ್ಚಾದಾಗ ಯಾವೆಲ್ಲ ಆರೋಗ್ಯ ಸಮಸ್ಯೆ ಉಂಟಾಗುತ್ತೆ ಎನ್ನೋದನ್ನು ನೋಡೋಣ.

ಸ್ನಾಯುಗಳ ದುರ್ಬಲತೆ
ಕೊಲೆಸ್ಟ್ರಾಲ್ ಶೇಖರಣೆಯಿಂದ ರಕ್ತನಾಳಗಳು ಕುಗ್ಗಿ ಕಾಲುಗಳ ಸ್ನಾಯುಗಳಲ್ಲಿ ದೌರ್ಬಲ್ಯತೆ ಉಂಟಾಗುತ್ತದೆ. ನಡೆಯುವಾಗ, ಸಮತೋಲನದ ವೇಳೆ ಅಥವಾ ಹೆಚ್ಚು ಕಾಲ ನಿಂತುಕೊಂಡಾಗ ನಿಶ್ಯಕ್ತವಾಗುವುದು ಇವುಗಳ ಲಕ್ಷಣವಾಗಿದೆ.

ಕಾಲು ನೋವು ಅಥವಾ ಅಸ್ವಸ್ಥತೆ
ಕೊಲೆಸ್ಟ್ರಾಲ್‌ನ ಪ್ರಮುಖ ಲಕ್ಷಣವೆಂದರೆ ಪೆರಿಫೆರಲ್ ಆರ್ಟರಿ ಡಿಸೀಸ್ (PAD) ನಿಂದ ಉಂಟಾಗುವ ಕಾಲು ನೋವು. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾದಾಗ ಅದು ಕುಗ್ಗಿ, ಆಮ್ಲಜನಕದ ಪೂರೈಕೆಯು ಸರಿಯಾಗಿ ಆಗದೆ ನೋವು, ನಿಶ್ಯಕ್ತಿ, ಆಯಾಸ ಮತ್ತು ಬಳಲಿಕೆಯಂತಹ ಲಕ್ಷಣಗಳು ಕಂಡುಬರುತ್ತದೆ.

ಮರಗಟ್ಟುವಿಕೆ
ನರಗಳಿಗೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗದಿದ್ದರೆ ಸೂಜಿಯಲ್ಲಿ ಚುಚ್ಚಿದಂತೆ ಅಥವಾ ಸ್ಪರ್ಶವು ಕಳೆದುಕೊಂಡ ಅನುಭವವಾಗುವುದು. ಇದಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಹಾಗೆಯೇ ಬಿಟ್ಟರೆ ಅಥವಾ ಕೊಲೆಸ್ಟ್ರಾಲ್ ಹೆಚ್ಚಾದರೆ ದೀರ್ಘಕಾಲದವರೆಗೆ ಮರಗಟ್ಟುತ್ತದೆ ಅಥವಾ ಜುಮ್ಮೆನಿಸುತ್ತದೆ.

ಪಾದವು ತಂಪಾಗುವುದು
ರಕ್ತನಾಳಗಳಲ್ಲಿ ಸರಿಯಾಗಿ ರಕ್ತಸರಬರಾಜು ಆಗದಿರುವುದರಿಂದ ನಡೆಯುವಾಗ ಅಥವಾ ನಡೆದ ಬಳಿಕ ದೇಹದ ಬೇರೆ ಭಾಗಗಳಿಗೆ ಹೋಲಿಸಿದರೆ ಕಾಲಿನ ಪಾದವು ತುಂಬಾ ತಂಪಾಗಿರುವ ಅನುಭವವಾಗುತ್ತದೆ. ಆದ್ದರಿಂದ ಕೈ, ಕಾಲುಗಳು ಹೆಚ್ಚು ತಪ್ಪಾಗದಂತೆ ನೋಡಿಕೊಳ್ಳಬೇಕು.

ಗಾಯ ನಿಧಾನವಾಗಿ ಒಣಗುವುದು
ಕಾಲು ಮತ್ತು ಪಾದಗಳಲ್ಲಿರುವ ಸಣ್ಣ ಗಾಯಗಳಿದ್ದರೆ ಅವು ಒಣಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅಂಗಾಂಶಗಳಿಗೆ ಸರಿಯಾಗಿ ಪೋಷಕಾಂಶಗಳು ಮತ್ತು ಆಮ್ಲಜನಕವು ಸಿಗುವುದಿಲ್ಲ. ಇದರಿಂದ ಸಣ್ಣ ಗಾಯ ಒಣಗಲು ತಿಂಗಳುಗಟ್ಟಲೇ ಸಮಯ ತೆಗೆದುಕೊಳ್ಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!