ದೆಹಲಿ ಏರ್ ಪೋರ್ಟ್ ನಲ್ಲಿ 138 ವಿಮಾನ ಹಾರಾಟ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹಿನ್ನೆಲೆ ವಿವಿಧ ವಿಮಾನಯಾನ ಸಂಸ್ಥೆಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 138 ವಿಮಾನಗಳನ್ನು ರದ್ದುಗೊಳಿಸಿವೆ.

ಶುಕ್ರವಾರ ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಒಟ್ಟು 66 ದೇಶೀಯ ನಿರ್ಗಮನಗಳು ಮತ್ತು 63 ಆಗಮನ ವಿಮಾನಗಳು, ಹಾಗೆಯೇ 5 ಅಂತಾರಾಷ್ಟ್ರೀಯ ನಿರ್ಗಮನಗಳು ಮತ್ತು 4 ಆಗಮನ ವಿಮಾನಗಳ ಹಾರಾಟವನ್ನು ಭದ್ರತಾ ದೃಷ್ಟಿಯಿಂದ ರದ್ದು ಮಾಡಲಾಗಿದೆ.

ವಾಯುಪ್ರದೇಶದ ಪರಿಸ್ಥಿತಿ ಮತ್ತು ಹೆಚ್ಚಿದ ಭದ್ರತಾ ಕ್ರಮಗಳಿಂದಾಗಿ, ಕೆಲವು ವಿಮಾನಗಳ ವೇಳಾಪಟ್ಟಿ ಮತ್ತು ಭದ್ರತಾ ಪ್ರಕ್ರಿಯೆಯ ಸಮಯದ ಮೇಲೆ ಪರಿಣಾಮ ಬೀರಬಹುದು ಎಂದು ಡಿಐಎಎಲ್ಎಕ್ಸ್ ಮೂಲಕ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!