ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಭಾರತ ನಡುವೆ ದಾಳಿ ಆರಂಭವಾದ ಬೆನ್ನಲ್ಲೆ ಪಾಕ್ ಪ್ರೇಮಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ನೆಟ್ಟಿಗರಿಗೆ ಭರ್ಜರಿ ಆಹಾರವಾಗತೊಡಗಿದೆ.
ಒಂದೆಡೆ ಪಾಕಿಸ್ತಾನಿಯರು ಹರಿಬಿಡುತ್ತಿರುವ ಫೇಕ್ ಸುದ್ದಿಗಳಿಗೆ ಲೆಕ್ಕವೇ ಇಲ್ಲ. ರಫೇಲ್ ಜೆಟ್‌ಅನ್ನು ಹೊಡೆದು ಹಾಕಿದ್ದೇವೆ ಅನ್ನೋದರಿಂದ ಹಿಡಿದು, ಭಾರತದ ಪೈಲಟ್ ಶಿವಾಂಗಿ ಸಿಂಗ್‌ರನ್ನು ಸೆರೆ ಹಿಡಿದಿದ್ದೇವೆ ಅನ್ನೋದರವರೆಗೆ ಎಲ್ಲವೂ ಸುಳ್ಳು ಸುದ್ದಿಗಳೇ. ಇದರ ನಡುವೆ ಪಾಕಿಸ್ತಾನಿಯೊಬ್ಬ ಮಾಡಿರುವ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಆತ, ‘ಪಾಕಿಸ್ತಾನದ ನೌಕಾಸೇನೆ ಬೆಂಗಳೂರು ಪೋರ್ಟ್‌ಅನ್ನು ಧ್ವಂಸ ಮಾಡಿದೆ..’ ಎಂದು ಪಾಕಿಸ್ತಾನದ ಧ್ವಜದ ಇಮೋಜಿಯೊಂದಿಗೆ ಪೋಸ್ಟ್ ಮಾಡಿದ್ದಾನೆ.
https://x.com/BengaluruRains_/status/1921116965751357446
ಇದಕ್ಕೆ ಬೆಂಗಳೂರಿಗರು ಸಖತ್ ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ಯುದ್ಧದದ ಕಾರ್ಮೋಡದ ನಡುವೆಯೂ ಪರಿಸ್ಥಿತಿ ತಿಳಿಯಾಗಿದೆ. ‘ಬೆಂಗಳೂರು ಬಂದರನ್ನು ನಾಶಪಡಿಸಿದ್ದಕ್ಕಾಗಿ ಪಾಕಿಸ್ತಾನಕ್ಕೆ ಅಭಿನಂದನೆಗಳು. ಭಾರತದ ಸಿಲ್ಕ್ ಬೋರ್ಡ್, ಟಿನ್ ಫ್ಯಾಕ್ಟರಿ, ಹೆಬ್ಬಾಳ, ಗೋರಗುಂಟೆಪಾಳ್ಯ, ಕೆಂಗೇರಿ ಮತ್ತು ವೈಟ್‌ಫೀಲ್ಡ್ ನೌಕಾ ನೆಲೆಗಳಲ್ಲಿನ ಸುಧಾರಿತ ರಕ್ಷಣಾ ಪ್ರತಿಬಂಧಕ ವ್ಯವಸ್ಥೆಗಳನ್ನು ಅವರು ಹೇಗೆ ಭೇದಿಸಿದ್ದಾರೆ ಎಂಬುದನ್ನು ನೋಡಿ ಇಡೀ ಜಗತ್ತು ಆಘಾತಕ್ಕೊಳಗಾಗಿದೆ. ಬೆಂಗಳೂರಿನಲ್ಲಿ ಸುರಕ್ಷಿತವಾಗಿರಿ’ ಎಂದು ಟ್ವೀಟ್ ಮಾಡಿದ್ದಾರೆ.
‘ಪಾಕಿಸ್ತಾನ ನಮ್ಮನ್ನು ಟಾರ್ಗೆಟ್ ಮಾಡುತ್ತದೆ ಎಂದು ಗೊತ್ತಾಗಿಯೇ ನಮ್ಮ ಡಿಸಿಎಂ ಸುರಂಗ ರಸ್ತೆಗೆ ಪ್ಲ್ಯಾನ್ ಮಾಡಿದ್ದಾರೆ’ ಎಂದು ಮತ್ತೊಬ್ಬರು ಬರೆದಿದ್ದಾರೆ.
ಇದಕ್ಕೂ ಮೊದಲು ಸ್ವತಃ ಪಾಕ್ ಪ್ರಧಾನಿ ಹಾಗೂ ಪಾಕ್ ರಕ್ಷಣಾ ಸಚಿವರು ಪಾಕ್ ಪರಾಕ್ರಮದ ಬಗ್ಗೆ ಮಾತನಾಡಿ ಜಾಗತಿಕ ಮಟ್ಟದಲ್ಲಿ ಅಪಹಾಸ್ಯಕ್ಕೀಡಾಗಿದ್ದರು.