ಕೊನೆಗೂ ಮೌನ ಮುರಿದ ಅಮಿತಾಬ್ ಬಚ್ಚನ್: ಜಗತ್ತು ಸಿಂದೂರವನ್ನು ಕೇಳುತ್ತಿದೆ ಎಂದ ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್‌ ಭಯೋತ್ಪಾದಕ ದಾಳಿ, ಆಪರೇಷನ್ ಸಿಂದೂರದ ಬಗ್ಗೆ ದೇಶದ ಇಡೀ ಜನತೆ ಒಗ್ಗಟ್ಟಾಗಿ ನಿಂತು ಸೈನಿಕರನ್ನು ದೇಶವನ್ನು ಬೆಂಬಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನಟ ನಟಿಯರು ಕೂಡ ಸೈನ್ಯವನ್ನು ಬೆಂಬಲಿಸಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಆದರೆ ಈ ಮಧ್ಯೆ, ಅಮಿತಾಬ್ ಬಚ್ಚನ್ ಮೌನವಾಗಿದ್ದರು.

ಆದರೆ ಈಗ ಪಹಲ್ಗಾಮ್ ದಾಳಿಯ 20 ದಿನಗಳ ನಂತರ ನಡೆಯುತ್ತಿರುವ ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಅಮಿತಾಬ್ ಬಚ್ಚನ್ ಮೌನ ಮುರಿದಿದ್ದಾರೆ.

ಅಮಿತಾಬ್ ಬಚ್ಚನ್ ಅವರ ಪೋಸ್ಟ್ “ರಜಾದಿನಗಳನ್ನು ಆಚರಿಸುತ್ತಿದ್ದಾಗ, ಆ ರಾಕ್ಷಸ ಅಮಾಯಕ ದಂಪತಿಯನ್ನು ಹೊರಗೆ ಎಳೆದುಕೊಂಡು ಹೋಗಿ, ಗಂಡನನ್ನು ವಿವಸ್ತ್ರಗೊಳಿಸಿ, ಗುಂಡು ಹಾರಿಸಲು ಪ್ರಾರಂಭಿಸಿದ. ಹೆಂಡತಿ ಮಂಡಿಯೂರಿ ತನ್ನ ಗಂಡನನ್ನು ಕೊಲ್ಲಬೇಡಿ ಎಂದು ಕಣ್ಣೀರು ಸುರಿಸುತ್ತಾ ವಿನಂತಿಸಿದ ನಂತರವೂ, ಆ ಹೇಡಿ ರಾಕ್ಷಸ ಗಂಡನನ್ನು ನಿರ್ದಯವಾಗಿ ಗುಂಡು ಹಾರಿಸಿ, ಹೆಂಡತಿಯನ್ನು ವಿಧವೆಯನ್ನಾಗಿ ಮಾಡಿದನು.”

ನನ್ನ ಕೈಯಲ್ಲಿ ಅಂತ್ಯಕ್ರಿಯೆಯ ಚಿತೆಯ ಬೂದಿ ಇದೆ, ಜಗತ್ತು ಸಿಂದೂರವನ್ನು ಕೇಳುತ್ತಿದೆ. ಎಂದು ಬರೆದುಕೊಂಡ ಬಚ್ಚನ್ ‘ಆಪರೇಷನ್ ಸಿಂದೂರ! ಜೈ ಹಿಂದ್! ಎಂದು ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!