ಪಾಕ್ ವಿರುದ್ಧ ವೀರೇಂದರ್ ಸೆಹ್ವಾಗ್ ಫುಲ್ ಗರಂ: ನಾಯಿ ಬಾಲ ಡೊಂಕು ಎಂದ ಮಾಜಿ ಕ್ರಿಕೆಟರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ಪಾಕಿಸ್ತಾನದ ವಿರುದ್ಧ ಕೆಂಡಾಮಂಡಲಾರಾಗಿದ್ದಾರೆ.

ಈ ಕುರಿತು ವೀರೇಂದ್ರ ಸೆಹ್ವಾಗ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ‘ನಾಯಿಯ ಬಾಲ ಎಂದಿಗೂ ನೇರವಾಗಿರುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಒಂದು ಮಾತಿನ ಮೂಲಕ ಅವರು ಪಾಕಿಸ್ತಾನವನ್ನು ನಾಯಿ ಎಂದು ಕರೆದಿದ್ದಾರೆ.

ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಾಗ ಸೆಹ್ವಾಗ್ ಈ ಹಿಂದೆಯೂ ಸಹ ವಾಗ್ದಾಳಿ ನಡೆಸಿದ್ದರು . ಅವರು ಈ ಹಿಂದಿನ ತಮ್ಮ ಪೋಸ್ಟ್‌ನಲ್ಲಿ, ಪಾಕಿಸ್ತಾನಕ್ಕೆ ಭಯೋತ್ಪಾದಕರ ವಿರುದ್ಧದ ಕ್ರಮವನ್ನು ಸಹಿಸಿಕೊಳ್ಳಲು ಆಗಲ್ಲ. ಅವರು ತಮ್ಮ ಭಯೋತ್ಪಾದಕರನ್ನು ರಕ್ಷಿಸಲು ಯುದ್ಧ ಮಾಡಲು ಮುಂದಾಗಿದ್ದಾರೆ ಎಂದು ಬರೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!