ತಾಯಂದಿರ ದಿನದಂದೇ ಯಂಗ್ ಮ್ಯೂಸಿಕ್ ಡೈರೆಕ್ಟರ್ ​ವಾಸುಕಿ ವೈಭವ್ ಮನೆಯಲ್ಲಿ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್​ವುಡ್​ನ ಯಂಗ್ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಂದಿರ ದಿನದಂದೇ ವಾಸುಕಿ ವೈಭವ್​ ಹಾಗೂ ಬೃಂದಾ ವಿಕ್ರಮ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವಿಚಾರವನ್ನು ವಾಸುಕಿ ವೈಭವ್ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿಕೊಂಡಿದ್ದಾರೆ.

ಆ ಫೋಟೋದಲ್ಲಿ ವಾಸುಕಿ ವೈಭವ್ ಅವರ ಪತ್ನಿ ಬೃಂದಾ ವಿಕ್ರಮ್ ಅವರ ಬೇಬಿ ಬಂಪ್​ ಲುಕ್​ ಅನ್ನು ರಿವೀಲ್​ ಮಾಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಿದ್ದಾರೆ.

ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು 2023 ನವೆಂಬರ್ 16ರಂದು ಗುರು-ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ವಾಸುಕಿ ವೈಭವ್ ಪತ್ನಿ ಬೃಂದಾ ಅವರು ಮೂಲತಃ ರಂಗಭೂಮಿ ಕಲಾವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!