ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಮೇ 8 ರಿಂದ ಐಪಿಎಲ್ ಸ್ಥಗಿತಗೊಂಡಿದೆ. ಐಪಿಎಲ್ ಫೈನಲ್ ಪಂದ್ಯ ಮೇ 25 ರಂದು ನಡೆಯಬೇಕಿತ್ತು, ಆದರೆ ಈಗ ಅದರ ಹೊಸ ದಿನಾಂಕ ಬಹಿರಂಗವಾಗಿದೆ.
ಬಿಸಿಸಿಐ ಹೊಸ ವೇಳಾಪಟ್ಟಿಯಲ್ಲಿ ಐಪಿಎಲ್ ಫೈನಲ್ ಪಂದ್ಯವನ್ನು ಸೀಮಿತ ಸ್ಥಳಗಳಲ್ಲಿ ಮೇ 25 ರ ಬದಲು ಮೇ 30 ರಂದು ನಡೆಸುವ ಸಾಧ್ಯತೆಯಿದೆ. ಇಂದು ರಾತ್ರಿಯೊಳಗೆ ಎಲ್ಲಾ ಐಪಿಎಲ್ ತಂಡಗಳಿಗೆ ವೇಳಾಪಟ್ಟಿಯನ್ನು ಕಳುಹಿಸಲಾಗುವುದು ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಪಂದ್ಯಗಳು ಮೇ 16 ರಿಂದ ಪುನಾರಂಭಗೊಳ್ಳಬಹುದು. ಯುದ್ದ ಮುಂದುವರಿದರೆ ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಮೂರು ಸ್ಥಳಗಳಲ್ಲಿ ಉಳಿದ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಯೋಚಿಸಲಾಗುತ್ತಿದೆ.
ಪಂಜಾಬ್ ಕಿಂಗ್ಸ್ ಹೊರತುಪಡಿಸಿ ಉಳಿದೆಲ್ಲಾ ತಂಡಗಳು ಮಂಗಳವಾರದೊಳಗೆ ತಮ್ಮ ತಮ್ಮ ಸ್ಥಳಗಳಿಗೆ ವರದಿ ಮಾಡಿಕೊಳ್ಳುವಂತೆ ಬಿಸಿಸಿಐ ಹೇಳಿದೆ ಎಂದು ವರದಿಗಳು ತಿಳಿಸಿದೆ. ಆಟಗಾರರು ಒಟ್ಟುಗೂಡಿದ ನಂತರ ಶುಕ್ರವಾರದೊಳಗೆ ಐಪಿಎಲ್ ಪುನರಾರಂಭವಾಗಬಹುದು.