Mental Health | ಸಂಜೆಯಾಗುತ್ತಿದಂತೆ ಕೆಲವರಲ್ಲಿ ಹೆಚ್ಚಾಗುತ್ತೆ ಭಯ, ಆತಂಕ: ಇದು ಮಾನಸಿಕ ಕಾಯಿಲೆನಾ?

ಸೂರ್ಯೋದಯ, ಸೂರ್ಯಾಸ್ತಮಾನ ಎರಡು ಬಹಳ ಅದ್ಬುತ ದೃಶ್ಯಗಳು. ಇವುಗಳನ್ನು ಕಣ್ತುಂಬಿಕೊಳ್ಳಲು ಜನ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಕೆಲವು ಜನರಿಗೆ ಸಂಜೆ ಸೂರ್ಯ ಮುಗಳುಗಿದ ನಂತರ ಆತಂಕ ಅಥವಾ ಭಯ ಹೆಚ್ಚಾಗುತ್ತೆ ಯಾಕೆ? ಇದು ಮಾನಸಿಕ ಸಮಸ್ಯೆನಾ? ಇಲ್ಲಿದೆ ಉತ್ತರ.

ಸೂರ್ಯಾಸ್ತದ ನಂತರದ ಆತಂಕವನ್ನು ಅನಾರೋಗ್ಯದ ಲಕ್ಷಣವೆಂದು ಪರಿಗಣಿಸದಿದ್ದರೂ ಇದು ನಿಜವೆಂದು ಮಾನಸಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಸ್ತದ ವೇಳೆ ಕಾಣಿಸಿಕೊಳ್ಳುವ ಆತಂಕ ಮನೋವೈದ್ಯಕೀಯ ಲಕ್ಷಣವಾಗಿದ್ದು, ಇದರಿಂದ ಖಿನ್ನತೆ, ಒಂಟಿತನ ಮತ್ತು ಹತಾಶೆಯಂತಹ ಭಾವನೆಗಳೂ ಕೂಡ ಈ ಸಂದರ್ಭದಲ್ಲಿ ಉಲ್ಬಣಗೊಳ್ಳುತ್ತದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಾಸ್ತದ ಆತಂಕ ಯಾಕೆ ಉಂಟಾಗುತ್ತದೆ?
ಮಾನವನು ಸೂರ್ಯನ ಬಿಸಿಲನ್ನು ಪಡೆದು ಉತ್ಪಾದಿಸಿಕೊಳ್ಳುವ ವಿಟಮಿನ್ ಡಿ ಹಲವಾರು ಕಾರ್ಯಗಳಿಗೆ ಅಗತ್ಯವಾಗಿದೆ. ಒಂದು ವೇಳೆ ಈ ನೈಸರ್ಗಿಕ ಬೆಳಕು ಕಡಿಮೆಯಾದರೆ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆಗ ಮನುಷ್ಯರಲ್ಲಿ ಸ್ನಾಯುಗಳು ಮತ್ತು ಜೀವಕೋಶಗಳ ಬೆಳವಣಿಗೆಯಾಗುವುದಿಲ್ಲ. ರಕ್ತದ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಚಿಂತೆ, ಒತ್ತಡ, ಅಸ್ವಸ್ಥತೆ, ಆತಂಕ ಹೆಚ್ಚಾಗುತ್ತದೆ. ಅದರಲ್ಲೂ ವಯಸ್ಕರಲ್ಲಿ ಈ ಲಕ್ಷಣಗಳನ್ನು ಹೆಚ್ಚಾಗಿ ಕಾಣಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!