ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಎರಡೂ ದೇಶಗಳ ಟಿ20 ಲೀಗ್ಗಳು ಸ್ಥಗಿತಗೊಂಡಿವೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (PSL) ಆರಂಭದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಅನ್ನು ದುಬೈನಲ್ಲಿ ನಡೆಸಲು ಯೋಜಿಸಿತ್ತು. ಆದರೆ ಯುಎಇ ಕೂಡ ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ವಿದೇಶಿ ಆಟಗಾರರನ್ನು ಸ್ವದೇಶಕ್ಕೆ ಕಳುಹಿಸುವ ಕೆಲಸ ನಡೆಸಿದೆ.
PSL ನಲ್ಲಿ ಭಾಗವಹಿಸಲು ಬಂದಿದ್ದ ವಿದೇಶಿ ಆಟಗಾರರು ಈ ಪರಿಸ್ಥಿತಿಯನ್ನು ನೋಡಿ, ತೀವ್ರ ಭಯಭೀತರಾಗಿದ್ದರು. ಕೊನೆಗೆ ಅವರು ದುಬೈ ತಲುಪಿ, ಅಲ್ಲಿಂದ ತಮ್ಮ ದೇಶಗಳಿಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ, ಬಾಂಗ್ಲಾದೇಶದ ಕ್ರಿಕೆಟಿಗ ರಿಷದ್ ಹೊಸೇನ್ ಪ್ರಯಾಣದ ಸಮಯದಲ್ಲಿ ಅವರು ಎದುರಿಸಿದ ತೊಂದರೆಗಳನ್ನು ಯೂಟ್ಯೂಬ್ ಚಾನೆಲ್ಗೆ ಬಹಿರಂಗಪಡಿಸಿದರು.
‘ನಾನು, ಸ್ಯಾಮ್ ಬಿಲ್ಲಿಂಗ್ಸ್, ಡೆರಿಲ್ ಮಿಚೆಲ್, ಸೇರಿದಂತೆ ಇನ್ನೂ ಅನೇಕರು ಒಂದೇ ಸಮಯದಲ್ಲಿ ಪಾಕಿಸ್ತಾನವನ್ನು ತೊರೆದೆವು. ನಾವು ಪಾಕಿಸ್ತಾನವನ್ನು ತೊರೆದ ಕೇವಲ 20 ನಿಮಿಷಗಳ ನಂತರ, ವಿಮಾನ ನಿಲ್ದಾಣದ ಬಳಿ ಕ್ಷಿಪಣಿ ದಾಳಿಯಾಗಿದೆ ಎಂದು ನಮಗೆ ತಿಳಿಯಿತು. ಈ ವಿಷಯ ಕೇಳಿ ನಮಗೆ ತುಂಬಾ ಭಯವಾಯಿತು’.
‘ನಾವು ದುಬೈಗೆ ಬಂದಿಳಿಯುತ್ತಿದ್ದಂತೆ, ಡೆರಿಲ್ ಮಿಚೆಲ್ ತಾನು ಮತ್ತೆ ಎಂದಿಗೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದರು’ ಎಂದು ರಿಷದ್ ಹೊಸೇನ್ ಹೇಳಿಕೊಂಡಿದ್ದಾರೆ.
ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇಂಗ್ಲೆಂಡ್ ಕ್ರಿಕೆಟಿಗರೂ ಕೂಡ ಮತ್ತೆ ಪಾಕಿಸ್ತಾನಕ್ಕೆ ಹಿಂತಿರುಗುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.