ಕೆಲವೊಮ್ಮೆ ಸಂಗಾತಿಗಳ ನಡುವೆ ಕಲಹ, ಭಿನ್ನಾಭಿಪ್ರಾಯಗಳು ಸಾಮಾನ್ಯ. ಈ ಗೊಂದಲ, ಗೋಜಲುಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಸೂಕ್ತ ವರ್ತನೆಗಳನ್ನು ಪ್ರದರ್ಶಿಸುವುದು ಬಹುಮುಖ್ಯ. ಆದರೆ ಸಂಗಾತಿಗಳ ಮಧ್ಯೆ ಈ ಕೆಲವು ಅಂಶಗಳು ಬಂದ್ರೆ ಅವರ ಸಂಬಂಧ ಹಾಳಾಗೋದು ಖಂಡಿತ.
ಸ್ಪಂದನೆ ಮಾಡದೆ ಇರುವುದು: ಪ್ರತಿಯೊಂದು ವಿಷಯದಲ್ಲಿ ಸಂಗಾತಿಯು ನಿಮ್ಮಿಂದ ಅಂತರ ಕಾಯ್ದುಕೊಂಡರೆ, ಹಾಗೂ ನಿಮ್ಮ ವಿಷಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸದೆ ಇದ್ದರೆ, ನಿಮ್ಮ ಸಂಬಂಧದಲ್ಲಿ ಬಿರುಕು ಆರಂಭವಾಗಿದೆ.
ನಿಂದನೆ: ಯಾವಾಗ ನಿಮ್ಮ ಸಂಗಾತಿ ನಿಮ್ಮ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಾರೋ ಆಗ ಅವರು ನಿಮ್ಮ ಜೊತೆಗೆ ಜಗಳ ಆಡುವ ಸಂದರ್ಭದಲ್ಲಿ ನಿಮ್ಮನ್ನ ವೈಯಕ್ತಿಕವಾಗಿನಿಂದನೆ ಮಾಡುತ್ತಾರೆ.
ನಿಮ್ಮನ್ನೇ ಹೊಣೆಯಾಗಿಸುವುದು: ಪ್ರತಿ ವಿಷಯಗಳು ಹಾಗೂ ಪ್ರತಿ ತಪ್ಪುಗಳಲ್ಲಿ ನಿಮ್ಮ ಸಂಗಾತಿ ನಿಮ್ಮನೆ ಹೊಣೆಯಾಗಿಸುತ್ತಿದ್ದರೆ, ಅವರು ನಿಮ್ಮಿಂದ ಅಂತರ ಕಾಯ್ದುಕೊಳ್ಳಲು ಬಯಸುತ್ತಿದ್ದಾರೆ ಎಂದರ್ಥ.
ಹಳೆಯದನ್ನ ಕೆದಕಿ ಜಗಳ ಮಾಡುವುದು: ನೀವು ಹಿಂದೆ ಯಾವಾಗಲೋ ಮಾಡಿದ ತಪ್ಪನ್ನು ಇಟ್ಟುಕೊಂಡು ಪದೇಪದೇ ನಿಮ್ಮ ಮೇಲೆ ಜಗಳ ಆಡುವುದು. ನಿಮ್ಮದಲ್ಲದ ತಪ್ಪುಗಳಿಗೆ ನಿಮ್ಮನ್ನ ಹೊಣೆಯಾಗಿಸುವುದು ಕೂಡ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದರ್ಥ.