ದೇಶ ಸುತ್ತಿ ನೋಡು ಕೋಶ ಓಡಿನೊಡು ಅನ್ನೋ ಗಾದೆಮಾತಿನಂತೆ ನಾವು ದೇಶ ಸುತ್ತಿದಷ್ಟು ನಮ್ಮ ಜ್ಞಾನ ಹೆಚ್ಚಾಗುತ್ತದೆ. ನೀವು ಪ್ರಪಂಚ ಸುತ್ತಲು ಪ್ಲಾನ್ ಮಾಡುತ್ತಿದ್ದರೆ, ನಿಮ್ಮ ಪ್ರವಾಸದಲ್ಲಿ ಮೊದಲಿರಬೇಕಾದ ಕೆಲವು ಸ್ಥಳಗಳಿವೆ.
ಸೌತ್ ಅಮೇರಿಕ: ದಕ್ಷಿಣ ಅಮೇರಿಕಾದಲ್ಲಿ ಬ್ರೆಜಿಲ್ನಲ್ಲಿ ಮಳೆಕಾಡುಗಳ ಮೂಲಕ ನಡೆಯುವುದರಿಂದ ಹಿಡಿದು ಪೆರುವಿನ ಲಾಮಾಗಳನ್ನು ನೋಡುವವರೆಗೆ ವಿಭಿನ್ನ ಅನುಭವಗಳನ್ನು ನೀಡುತ್ತದೆ. ಇದು ವಿಶ್ವದ ಅತ್ಯಂತ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದಾದ ಮಚು ಪಿಚುಗೆ ನೆಲೆಯಾಗಿದೆ.
ಯುರೋಪ್: ಇಲ್ಲಿನ ಮಾಂಟೆನೆಗ್ರೊದಲ್ಲಿ ಬೆರಗುಗೊಳಿಸುವ ಕಡಲತೀರ. ರೊಮೇನಿಯಾದ ಬುಕಾರೆಸ್ಟ್ನಂತಹ ನಗರಗಳು ನಿಮ್ಮನ್ನು ಬೆರಗುಗೊಳಿಸುವುದರಲ್ಲಿ ಸಂಶಯವೇ ಇಲ್ಲ.
ಏಷ್ಯಾ: ವಿಭಿನ್ನ ಪ್ರವಾಸದ ಅನುಭವವನ್ನು ಬಯಸುವವರಿಗೆ ಏಷ್ಯಾ ಉತ್ತಮ ಜಾಗ. ಜಪಾನ್ನ ಪುರಾತನ ದೇವಾಲಯಗಳು, ಇಕೆಬಾನಾ ಮತ್ತು ಬೋನ್ಸಾಯ್ ಉದ್ಯಾನಗಳು, ಚೀನಾದ ಮಹಾಗೋಡೆಯಂಥ ಅದ್ಭುತಗಳು, ಲ್ಯಾಂಟರ್ನ್ ಹಬ್ಬಗಳು ನಿಮ್ಮನ್ನು ನಿಮ್ಮನ್ನು ಬೆರಗುಗೊಳಿಸುತ್ತವೆ.
ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ಅಪರೂಪದ ಪ್ರಾಣಿಗಳಾದ ಕೋಲಾ ಕರಡಿಗಳು, ಕಾಂಗರೂಗಳು ಮತ್ತು ಪ್ಲಾಟಿಪಸ್ಗಳು ಸೇರಿದಂತೆ ವಿವಿಧ ಪ್ರಾಣಿಗಳಿಗೆ ನೆಲೆಯಾಗಿದೆ. ಆಲಿಸ್ ಸ್ಪ್ರಿಂಗ್ಸ್ನಲ್ಲಿರುವ ಕಾಂಗರೂ ಅಭಯಾರಣ್ಯ, ಸಿಡ್ನಿ ಒಪೇರಾ ಹೌಸ್, ಗ್ರೇಟ್ ಬ್ಯಾರಿಯರ್ ರೀಫ್ ಮೆರಿನ್ ಪಾರ್ಕ್ ಇಲ್ಲಿನ ಬೆಸ್ಟ್ ಪ್ಲೇಸ್ ಗಳು.