ಹೊಸದಿಗಂತ ವರದಿ,ವಿಜಯಪುರ:
ಪಾಕಿಸ್ತಾನ ತನ್ನ ಬಾಲ ಮುದುರಿಸಿಕೊಂಡಿದ್ದರೆ ಸರಿ, ಇಲ್ಲವಾದಲ್ಲಿ ನಾವು ಅದರ ಬಾಲ ಕತ್ತರಿಸುತ್ತೇವೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಪ್ರತಿಕಾರದಿಂದ ಹಿಂದುಗಳು ಒಂದಾಗಿದ್ದಾರೆ. 140 ಕೋಟಿ ಜನ ಮೋದಿ ನೇತೃತ್ವ ಒಪ್ಪಿಕೊಂಡಿದ್ದಾರೆ ಎಂದರು.
ಇಂತಹ ಸಂದರ್ಭದಲ್ಲಿ ಪಾಕಿಸ್ತಾನ ನಡುಗಿ ಹೊಗಿತ್ತು. ಭಿಕ್ಷೆ ಬೇಡುವ ಪರಿಸ್ಥಿತಿ ಇತ್ತು. ಇಂತಹ ಸಂದರ್ಭದಲ್ಲಿ ಯುದ್ದ ವಿರಾಮ ಆಯಿತು. ಆದರೆ ಮೂರೇ ಗಂಟೆಯಲ್ಲಿ ಪಾಕ್ ತನ್ನ ನರಿ ಬುದ್ದಿ ತೋರಿಸಿತು. ಇದು ಮುಂದುವರೆದರೆ ಭೂಪಟದಲ್ಲಿ ಪಾಕಿಸ್ತಾನ ಇಲ್ಲದಂತಾಗುತ್ತದೆ ಎಂದರು.
ಎಲ್ಲ ಪಕ್ಷಗಳು ಕೂಡ ದೇಶ ಒಂದು ಅಂತ ಹೇಳುವಲ್ಲಿ ಯಶಸ್ವಿ ಆಗಿದ್ದಾರೆ. ಅವರು ಬಹಳ ಸುಳ್ಳು ಹೇಳುತ್ತ ಬಂದಿದ್ದಾರೆ. ವಿಶ್ವದ ಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿ ಅದಕ್ಕೆ ಇದೆ. ಸಿಂಧೂ ನದಿಯ ಒಪ್ಪಂದ ರದ್ದು ಮಾಡಿ ಪ್ರಪಂಚದ ಮುಂದೆ ಭಾರತದ ಶಕ್ತಿ ತೋರಿಸಿದ್ದು ಮೋದಿ ಎಂದರು.
ಪಾಕಿಸ್ತಾನಕ್ಕೆ ಬೆಂಬಲ ಪೋಸ್ಟ್ ವಿಚಾರಕ್ಕೆ, ಕೆಲವರು ಪಾಕಿಸ್ತಾನ ಹೇಗೆ ನರಿಬುದ್ಧಿ ತೋರಿಸುತ್ತೆ ಹಾಗೆ ದೇಶದ ಒಳಗೆ ರಾಷ್ಟ್ರದ್ರೋಹಿಗಳಿದ್ದಾರೆ. ಇದನ್ನು ಗಮನಿಸಿ ರಾಷ್ಟ್ರ ಭಕ್ತರು ಅದನ್ನು ನೋಡಿಕೊಳ್ಳಬೇಕು ಎಂದರು.
ಭಾರತದ ಸಂವಿಧಾನದಲ್ಲಿ ಆ ರೀತಿ ಇದೆ ಕಾನೂನಿನ ತಿದ್ದುಪಡಿ ಆಗಬೇಕು ಆಗ ಎಲ್ಲ ಸರಿ ಹೋಗುತ್ತದೆ. ಹಾವೇರಿ ಜಿಲ್ಲೆಯ ಮಹಿಳೆಯ ಹತ್ಯೆ, ಮಂಗಳೂರಿನ ಸುಹಾಸ್ ಹತ್ಯೆಗೆ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ ಎಂದರು.
ಬಿಜೆಪಿಯಿಂದ ಯತ್ನಾಳ್ ಗೆ ಉಚ್ಚಾಟನೆ ವಿಚಾರಕ್ಕೆ, ಪ್ರಧಾನಿ ನರೇಂದ ಮೋದಿ ಅವರೊಬ್ಬ ವಿಶ್ವ ನಾಯಕರು. ಇಂತಹ ವಿಚಾರದಲ್ಲಿ ಅವರು ತಲೆ ಹಾಕುವುದಿಲ್ಲ. ಇದನ್ನು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ. ಪಕ್ಷದಲ್ಲಿ ಕೆಲವು ಸಣ್ಣಪುಟ್ಟ ಲೋಪಗಳಿವೆ ಅವು ಸರಿ ಹೋಗಲಿ ಅಂತ ಈ ರೀತಿ ಆಗುತ್ತಿದೆ. ಸರಿ ಹೋಗುವ ಭರವಸೆ ಇದೆ ಎಂದರು.
ಈ ವಿಷಯ ರಾಷ್ಟ್ರೀಯ ನಾಯಕರ ಗಮನಕ್ಕೆ ತರುವುದಕ್ಕಾಗಿಯೇ ನಾನು ಚುನಾವಣೆಗೆ ಸ್ಪರ್ದಿಸಿದ್ದೇನೆ. ಎಲ್ಲವೂ ಸರಿ ಹೋಗುತ್ತದೆ ಅನ್ನುವ ಭರವಸೆ ಇದೆ ಎಂದರು.
ಹೊಸ ಪಕ್ಷ ಕಟ್ಟುವ ವಿಚಾರಕ್ಕೆ, ನಾನಂತೂ ಹೊಸ ಪಕ್ಷ ಕಟ್ಟುವದಿಲ್ಲ ಯತ್ನಾಳ್ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಕುತ್ತಿಗೆ ಕೋಯ್ದರೂ ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದರು.