ಪಾಕ್‌ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ರೆ ಪ್ರತಿದಾಳಿ ನಡೆಸಿ: ಕಮಾಂಡರ್​ಗಳಿಗೆ ಸಿಕ್ಕಿತು ಪರಮಾಧಿಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಮತ್ತೆ ದಾಳಿ ನಡೆಸಿದರೆ ಭೀಕರ ತಿರುಗೇಟು ನೀಡಲು ಸೇನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಮಾಧಿಕಾರ ನೀಡಿದ್ದಾರೆ.

ಪಾಕಿಸ್ತಾನ ಸೇನೆಯು ಗಡಿಯಲ್ಲಿ ಒಪ್ಪಂದ ಉಲ್ಲಂಘಿಸಿದರೆ ಅದರ ದುಪ್ಪಟ್ಟು ಪ್ರಮಾಣದಲ್ಲಿ ತಿರುಗೇಟು ನೀಡಲು ಸೇನಾ ಮುಖ್ಯಸ್ಥ ಜನರಲ್​ ಉಪೇಂದ್ರ ದ್ವಿವೇದಿ ಅವರು ಸೇನಾ ಕಮಾಂಡರ್​ಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ.

ಪಶ್ಚಿಮ ಗಡಿಗಳ ಸೇನಾ ಕಮಾಂಡರ್​ಗಳ ಜೊತೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಕಲಿಸಲು ಪರಮಾಧಿಕಾರ ನೀಡಿರುವುದಾಗಿ ಪ್ರಕಟಿಸಿದ್ದಾರೆ.

ಸಂಘರ್ಷವನ್ನು ನಿಲ್ಲಿಸಲು ಮೇ 10ರಂದು ಪಾಕಿಸ್ತಾನ ಮತ್ತು ಭಾರತದ ಡಿಜಿಎಂಒಗಳು ಮಾತುಕತೆ ನಡೆಸಿ ಕದನ ವಿರಾಮ ಘೋಷಿಸಿದ್ದಾರೆ. ಇಷ್ಟಾಗಿಯೂ ಪಾಕಿಸ್ತಾನ ನಿಯಮ ಮುರಿದಲ್ಲಿ ಭಾರತದ ಪ್ರತಿ ದಾಳಿ ಭೀಕರವಾಗಿರಬೇಕು. ಸೇನಾ ಕಮಾಂಡರ್​ಗಳು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸೇನಾ ಮುಖ್ಯಸ್ಥರು ಪರಮಾಧಿಕಾರ ನೀಡಿದ್ದಾಗಿ ಸೇನೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!