LIC ನಿಂದ ಹೊಸ ಅಪ್ಡೇಟ್: ಇನ್ಮುಂದೆ ವಾಟ್ಸಾಪ್ ಮೂಲಕ ಕಟ್ಟಬಹುದು ಪ್ರೀಮಿಯಂ

ಜೀವ ವಿಮಾ ನಿಗಮ LIC ತನ್ನ ಗ್ರಾಹಕರಿಗೆ ವಾಟ್ಸಾಪ್ ಮೂಲಕ ಪ್ರೀಮಿಯಂ ಪಾವತಿಸುವ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಈ ಹೊಸ ಸೌಲಭ್ಯದಿಂದ ಜನರಿಗೆ ಅನುಕೂಲವಾಗಲಿದೆ.

ಈ ವಾಟ್ಸಾಪ್ ಸೌಲಭ್ಯ ಹೇಗೆ ಕೆಲಸ ನಿರ್ವಹಿಸುತ್ತದೆ?
ಎಲ್‌ಐಸಿ ಗ್ರಾಹಕ ಪೋರ್ಟಲ್‌ನಲ್ಲಿ ನೋಂದಾಯಿತರಾದವರು ಈ ಸೇವೆಯನ್ನು ಬಳಸಬಹುದು.

ಮೊದಲು, 8976862090 ಸಂಖ್ಯೆಯನ್ನು ನಿಮ್ಮ ಫೋನ್‌ನಲ್ಲಿ ಸೇವ್ ಮಾಡಿ. ನಂತರ, ವಾಟ್ಸಾಪ್‌ನಲ್ಲಿ ‘HI’ ಎಂದು ಸಂದೇಶ ಕಳುಹಿಸಿ. ತಕ್ಷಣವೇ ಬಾಟ್ ಒಂದು ಸರಳ ಮೆನು ಕಳುಹಿಸುತ್ತದೆ. ಅದರಿಂದ ನೀವು ಪ್ರೀಮಿಯಂ ಪಾವತಿ, ಪಾಲಿಸಿ ಸ್ಥಿತಿ, ಅಥವಾ ಇತರ ಸೇವೆಗಳಿಗೆ ಸಂಬಂಧಿಸಿದ ಆಯ್ಕೆಯನ್ನು ಆರಿಸಬಹುದು. ಜೊತೆಗೆ ಯಾವ ಪಾಲಿಸಿಗಳ ಪ್ರೀಮಿಯಂ ಬಾಕಿ ಇದೆ ಎಂಬ ವಿವರಗಳು ತೋರಿಸಲ್ಪಡುತ್ತವೆ.

ಈ ಸೌಲಭ್ಯವು ಪ್ರೀಮಿಯಂ ಪಾವತಿಯನ್ನು ತ್ವರಿತ ಮತ್ತು ಸುಲಭವಾಗಿಸುತ್ತದೆ. ವಾಟ್ಸಾಪ್ ಈಗ ಜನಪ್ರಿಯ ಸಂವಹನ ಸಾಧನವಾಗಿರುವುದರಿಂದ, ಇದು ಗ್ರಾಹಕರಿಗೆ ಎಲ್ಲಿಂದಲಾದರೂ, ಯಾವಾಗಲಾದರೂ ಪಾವತಿ ಮಾಡಲು ಅನುಕೂಲಕರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!