ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ IPL ಮೇಲೆ ಬಹಳ ದೊಡ್ಡ ಪೆಟ್ಟನ್ನೇ ನೀಡಿದೆ. ಪಂದ್ಯಗಳು ಒಂದು ವಾರ ಮುಂದೂಡಲ್ಪಟ್ಟಿದ್ದು, ಈಗಾಗಲೇ ಕೆಲವು ವಿದೇಶಿ ಕ್ರಿಕೆಟಿಗರು ತವರಿಗೆ ಮರಳಿದ್ದಾರೆ.
ಈ ನಡುವೆ ಆಸ್ಟ್ರೇಲಿಯಾ ಪ್ರಮುಖ ವೇಗಿಗಳು ಐಪಿಎಲ್ನ ಉಳಿದ ಭಾಗಕ್ಕೆ ಬರದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದ ಮಿಚೆಲ್ ಸ್ಟಾರ್ಕ್ ಹಾಗೂ ಆರ್ಸಿಬಿ ಪರ ಆಡುತ್ತಿದ್ದ ಜೋಸ್ ಹ್ಯಾಜಲ್‌ವುಡ್ ಟೂರ್ನಿಯ ಉಳಿದ ಭಾಗಕ್ಕಾಗಿ ವಾಪಸ್ ಬರದಿರಲು ನಿರ್ಧರಿಸಿದ್ದಾರೆ.
ಪ್ರಸ್ತುತ, ಹ್ಯಾಜಲ್‌ವುಡ್ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಐಪಿಎಲ್ ಮೇ 16 ರಿಂದ ಮತ್ತೆ ಆರಂಭವಾಗುವ ಸಾಧ್ಯತೆ ಇದ್ದರೂ, ಜೂನ್ 11 ರಂದು ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಯಾರಿ ನಡೆಸುವುದರಿಂದ ಅವರು ಭಾರತಕ್ಕೆ ಮರಳುವುದು ಅನುಮಾನವಾಗಿದೆ.
ಮಿಚೆಲ್ ಸ್ಟಾರ್ಕ್ ಅವರ ತಂಡ ದಿಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು ಪ್ಲೇಆಫ್‌ಗೆ ತೇರ್ಗಡೆಯಾಗಲು ಮತ್ತು ಟೈಟಲ್‌ಗಾಗಿ ಸ್ಪರ್ಧಿಸಲು ಸ್ಟಾರ್ಕ್‌ನ ಸೇವೆಯ ಅಗತ್ಯವಿದೆ. ಆದರೆ ಆಸ್ಟ್ರೇಲಿಯಾ ಮಾಧ್ಯಮಗಳ ಪ್ರಕಾರ ಸ್ಟಾರ್ಕ್ ಭಾರತಕ್ಕೆ ವಾಪಸ್ ಬರಲ್ಲ ಎಂದು ಹೇಳಿವೆ.