ಹೊಸದಿಗಂತ ಡಿಜಿಟಲ್ ಡೆಸ್ಕ್:
ಕದನಕ್ಕೆ ವಿರಾಮ ಎಂದು ಹೇಳಿಕೊಂಡು ಬೆನ್ನಲ್ಲೇ ದಾಳಿ ಮಾಡೋ ಪಾಕಿಸ್ತಾನ ನ್ಯಾಯವಾಗಿ ಯುದ್ಧ ಮಾಡೋ ಮಾತೇ ಇಲ್ಲ. ಸೋಲು ಹತ್ತಿರದಲ್ಲೇ ಇದೆ ಎಂದಾಗ ಯಾವ ದಾರಿಯನ್ನಾದರೂ ಆರಿಸೋಕೆ ಪಾಕ್ ಹೇಸೋದಿಲ್ಲ. ಇದರಲ್ಲಿ ಸೈಬರ್ ಅಟ್ಯಾಕ್ ಕೂಡ ಒಂದು.
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಪಾಕ್ ಸೈಬರ್ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ನಾಗರಿಕರು ಜಾಗೃತರಾಗಿರುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಅಪರಿಚಿತ ಲಿಂಕ್, ಇ-ಮೇಲ್ಗಳ ಮೇಲೆ ನಿಗಾವಹಿಸಿ. ಎಕ್ಸ್ಕ್ಲೂಸಿವ್ ನ್ಯೂಸ್ ಲಿಂಕ್ಗಳು ಹಾಗೂ ಎಪಿಕೆ ಫೈಲ್ಸ್, ಅಪರಿಚಿತ ಫಾರ್ವರ್ಡ್ ಲಿಂಕ್ ಕ್ಲಿಕ್ ಮಾಡದಂತೆ, ವಾಟ್ಸಾಪ್ ಸೆಕ್ಯೂರಿಟಿ ಅಪ್ಡೇಟ್ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.