ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಾಮಿಡಿ ಕಿಲಾಡಿಗಳು ಸೀಸನ್ 3’ರ ವಿನ್ನರ್ ರಾಕೇಶ್ ಪೂಜಾರಿ ಹೃದಯಾಘಾತದಿಂದ ಇಂದು ಬೆಳಗ್ಗಿನ ಜಾವ ನಿಧನರಾಗಿದ್ದಾರೆ.
ರಾಕೇಶ್ ನಿಧನಕ್ಕೆ ಕಾಮಿಡಿ ಕಿಲಾಡಿ ಶೋನ ತೀರ್ಪುಗಾರರಾಗಿದ್ದ ರಕ್ಷಿತಾ ಪ್ರೇಮ್ ಕೂಡ ಸಂತಾಪ ಸೂಚಿಸಿದ್ದಾರೆ. ನಿನ್ನ ಜೊತೆ ಇನ್ಯಾವತ್ತೂ ಮಾತಾಡೋಕೆ ಆಗೋದಿಲ್ವಾ? ಮೃದು ಸ್ವಭಾವ ನಿನ್ನದು, ಕಾಮಿಡಿ ಕಿಲಾಡಿಗಳು ಶೋ ನನ್ನ ಮನಸ್ಸಿಗೆ ತುಂಬಾ ಹತ್ತಿರ. ಹಾಗೇ ನಿನ್ನ ಜೊತೆ ಕಳೆದ ಸಮಯ ಸದಾ ನೆನಪಿನಲ್ಲಿಯೇ ಇದೆ ಎಂದಿದ್ದಾರೆ.
ರಾಕೇಶ್, ನನ್ನ ನೆಚ್ಚಿನ ವ್ಯಕ್ತಿ. ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು, ಮಿಸ್ ಯೂ ಮಗನೇ. ನಾನು ಇನ್ನೂ ಎಂದಿಂಗೂ ರಾಕೇಶ್ ಅವರನ್ನು ಮಾತನಾಡಿಸಲು ಸಾಧ್ಯವಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗ್ತಿದೆ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ಹತ್ತಿರವಿರುವ ಕಾರ್ಯಕ್ರಮ. ಅದರಲ್ಲಿ ರಾಕೇಶ್ ಕೂಡ ಒಬ್ಬರು. ಒಳ್ಳೆಯ ವ್ಯಕ್ತಿ, ಟ್ಯಾಲೆಂಟೆಡ್ ಕಲಾವಿದನಾಗಿದ್ರು. ನೀವೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತವಾಗಿರುತ್ತೀರಾ. ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿನ್ನ ನಗು ಮತ್ತು ನಿನ್ನ ಸುತ್ತ ಇರುವವರನ್ನು ನಗುಸುತ್ತಿದ್ದ ರೀತಿ. ಥ್ಯಾಂಕ್ಯೂ ರಾಕೇಶ್ ಎಂದು ಬರೆದುಕೊಂಡಿದ್ದಾರೆ.