ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ರಲ್ಲಿ ನಟನೆ ಮಾಡಿದ್ದರು.
ತಮ್ಮ ಪಾತ್ರದ ಶೂಟಿಂಗ್ ಕೂಡ ಮುಗಿಸಿ ಕೊಟ್ಟಿದ್ದರು ಎಂದು ಚಿತ್ರತಂಡ ಮೂಲಗಳು ತಿಳಿಸಿವೆ. ಕಿರುತೆರೆಯಲ್ಲಿ ಫೇಮಸ್ ಆಗಿದ್ದ ರಾಕೇಶ್‌ಗೆ ಹಿರಿತೆರೆಯಲ್ಲಿ ಇದೊಂದು ಬೆಸ್ಟ್ ಆಪರ್ಚುನಿಟಿ ಆಗಿತ್ತು.
ರಿಷಬ್ ನಿರ್ದೇಶನದ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ರಲ್ಲಿ ಪಾತ್ರವೊಂದರದಲ್ಲಿ ರಾಕೇಶ್ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರದ ಶೂಟಿಂಗ್ ಕೂಡ ಮುಗಿಸಿ ಕೊಟ್ಟಿದ್ದರು. ಈ ಚಿತ್ರದ ಮೇಲೆ ನಟ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ನಿನ್ನೆ ಬೆಳಗ್ಗೆ ‘ಕಾಂತಾರ’ ಶೂಟಿಂಗ್ ಮುಗಿಸಿ ಸಂಜೆ ಗೆಳೆಯರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ, ಸ್ನೇಹಿತರ ಜೊತೆ ಇದ್ದಾಗ ಹೃದಯಘಾತದಿಂದ ರಾಕೇಶ್ ನಿಧನರಾಗಿದ್ದಾರೆ.