ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ವಿರುದ್ದದ ಆಪರೇಷನ್ ಸಿಂದೂರ್ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಏರ್ ಮಾರ್ಷಲ್ ಎಕೆ ಭಾರ್ತಿ,‘‘ದಯೆಯನ್ನು ದೌರ್ಬಲ್ಯವೆಂದು ಭಾವಿಸಬಾರದು’’ ಎನ್ನುವ ರಾಮಧಾರಿ ಸಿಂಗ್ ದಿನಕರ್ ರಾಮ ಚರಿತ ಮಾನಸದಲ್ಲಿ ಬರೆದಿರುವ ಸಾಲುಗಳನ್ನು ಮೆಲುಕುಹಾಕಿದ್ದಾರೆ.
ಇಷ್ಟು ದಿನ ಪಾಕಿಸ್ತಾನದ ಬಗ್ಗೆ ತೋರಿದ ದಯೆಯನ್ನು ನಮ್ಮ ದುರ್ಬಲತೆ ಎಂದುಕೊಳ್ಳಬಾರದು. ‘विनय ना मानत जलध जड़ गए तीन दिन बीति। बोले राम सकोप तब भय बिनु होय ना प्रीति’ ಎನ್ನುವ ಸಾಲುಗಳನ್ನು ಹೇಳಿದ್ದಾರೆ. ಈ ಸಾಲುಗಳನ್ನು ಶ್ರೀ ರಾಮಚರತ ಮಾನಸದ ಸುಂದರಕಾಂಡದಿಂದ ತೆಗೆದುಕೊಳ್ಳಲಾಗಿದೆ.
ಇದರಲ್ಲಿ ಶ್ರೀರಾಮನು ಸಮುದ್ರದಿಂದ ಲಂಕೆಗೆ ದಾರಿ ಮಾಡಲು ವಿನಂತಿಸುತ್ತಾನೆ. ಮೂರು ದಿನಗಳ ಕಾಲ ಬೇಡಿಕೊಂಡ ನಂತರವೂ ಸಮುದ್ರವು ಶಾಂತವಾಗದಿದ್ದಾಗ, ಶ್ರೀರಾಮ ಕೋಪಗೊಂಡು, ಭಯವಿಲ್ಲದೆ ಯಾವುದೇ ವ್ಯಕ್ತಿ ಅಥವಾ ಯಾವುದೇ ವಸ್ತುವು ಯಾವುದನ್ನೂ ಪಾಲನೆ ಮಾಡುವುದಿಲ್ಲ ಎಂದು ಹೇಳುತ್ತಾನೆ. ಅದನ್ನು ಇಲ್ಲಿ ವಿವರಿಸಲಾಗಿದೆ. ಮತ್ತೊಂದು ಅರ್ಥದಲ್ಲಿ ನಮ್ರತೆಗೆ ಬೆಲೆ ಕೊಡದಿದ್ದರೆ, ಬಲವು ಅಗತ್ಯವಾಗುತ್ತದೆ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ.
ಪಾಕಿಸ್ತಾನ ನಮ್ಮ ವಾಯುನೆಲೆಗಳ ಮೇಲೆ ಪದೇ ಪದೇ ದಾಳಿ ಮಾಡಿದಾಗಲೆಲ್ಲಾ, ನಮ್ಮ ಬಲಿಷ್ಠ ವಾಯು ರಕ್ಷಣಾ ಗ್ರಿಡ್ ಮುಂದೆ ಅವರು ವಿಫಲರಾದರು ಎಂದು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದರು. ನಮ್ಮ ವಾಯು ರಕ್ಷಣೆ ಎಷ್ಟು ಬಲಿಷ್ಠವಾಗಿತ್ತೆಂದರೆ ಪಾಕಿಸ್ತಾನಕ್ಕೆ ಯಾವುದೇ ಅವಕಾಶವಿರಲಿಲ್ಲ. ನಿನ್ನೆ ನೀವು ಪಾಕಿಸ್ತಾನಿ ವಾಯುನೆಲೆಯ ದುಃಸ್ಥಿತಿಯನ್ನು ನೋಡಿದ್ದೀರಿ. ನಮ್ಮ ಎಲ್ಲಾ ವಾಯುನೆಲೆಗಳು ಉತ್ತಮ ಸ್ಥಿತಿಯಲ್ಲಿವೆ ಎಂದರು.