ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್‌ನ ನಟ ಧನುಷ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಕುಬೇರ’ ಚಿತ್ರದ ರಿಲೀಸ್ ಡೇಟ್ ಅನ್ನು ಚಿತ್ರ ತಂಡ ಅನೌನ್ಸ್ ಮಾಡಿದೆ.
90 ರಿಂದ 120 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಕುಬೇರ ಸಿನಿಮಾ ಇದೇ ವರ್ಷ ಜೂನ್ 20 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಶೇಖರ್ ಕಮ್ಮುಲಾ ಡೈರೆಕ್ಷನ್ ಮಾಡಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಕೊಟ್ಟಿದ್ದಾರೆ. ತೆಲುಗು, ತಮಿಳು, ಹಿಂದಿ ಹೀಗೆ ಈ ಮೂರು ಭಾಷೆಯಲ್ಲಿಯೇ ಈ ಚಿತ್ರ ತಯಾರಾಗಿದೆ.
ಕುಬೇರ ಚಿತ್ರದಲ್ಲಿ ಸೋಷಿಯಲ್ ಥ್ರಿಲ್ಲಿಂಗ್ ಎಲಿಮೆಂಟ್ಸ್ ಇವೆ. ಈ ಮೂಲಕ ಧನುಷ್ ಮತ್ತು ನಾಗಾರ್ಜುನ್ ಇಲ್ಲಿ ಬೇರೆ ರೀತಿಯ ಕಥೆಗೆ ಜೀವ ತುಂಬಿದ್ದಾರೆ. ಚಿತ್ರದ ಪೋಸ್ಟರ್ ಅಲ್ಲಿ ಧನುಷ್ ಮತ್ತು ನಾಗಾರ್ಜುನ್ ಮುಖಾಮುಖಿ ಇರೋ ಫೋಟೋವನ್ನೆ ಹೆಚ್ಚು ಹೈಲೈಟ್ ಮಾಡಲಾಗಿದೆ. ಹಾಗಾಗಿಯೇ ಈ ಚಿತ್ರದ ಬಗ್ಗೆ ಜಾಸ್ತಿನೇ ಕುತೂಹಲವೂ ಇದೆ.