ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ಮತ್ತು ಅಮೆರಿಕ ದೇಶಗಳು ತೆರಿಗೆ ವಿಚಾರದಲ್ಲಿ ಕೊನೆಗೂ ಪಟ್ಟು ಸಡಿಲಿಸಿದ್ದು, ಸುಂಕ ಕಡಿತಕ್ಕೆ ಪರಸ್ಪರ ಒಪ್ಪಿಗೆ ಸೂಚಿಸಿವೆ.
ಇತ್ತೀಚಿನ ಅಮೆರಿಕ-ಚೀನಾ ದೇಶಗಳು ಪರಸ್ಪರ ಸರಕುಗಳ ಮೇಲಿನ ಸುಂಕವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ತಾತ್ವಿಕವಾಗಿ ಒಪ್ಪಿಕೊಂಡಿವೆ ಎಂದು ಜಿನೀವಾದಲ್ಲಿ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉಭಯ ದೇಶಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಿಗೆ ಹೆಚ್ಚು ಶಾಶ್ವತವಾದ ಒಪ್ಪಂದದತ್ತ ಕೆಲಸ ಮಾಡಲು ಹೆಚ್ಚುವರಿ ಮೂರು ತಿಂಗಳುಗಳನ್ನು ನೀಡುವ ಉದ್ದೇಶವನ್ನು ಈ ಕ್ರಮ ಹೊಂದಿದೆ ಎನ್ನಲಾಗಿದೆ.
ಅಮೆರಿಕವು ಮೇ 14 ರ ವೇಳೆಗೆ ಹೆಚ್ಚಿನ ಚೀನಾದ ಆಮದುಗಳ ಮೇಲಿನ ತನ್ನ ಸುಂಕವನ್ನು ಶೇ.145%ರಿಂದ 30% ಕ್ಕೆ ಇಳಿಸಲು ಮುಂದಾಗಿದೆ. ಇದರಲ್ಲಿ ಫೆಂಟನಿಲ್ಗೆ ಸಂಬಂಧಿಸಿದ ಸುಂಕಗಳು ಸೇರಿವೆ.
ಪ್ರತಿಯಾಗಿ, ಚೀನಾ ಸೋಮವಾರ ನಡೆದ ಬ್ರೀಫಿಂಗ್ನಲ್ಲಿ ಹೇಳಿಕೆ ಮತ್ತು ಅಧಿಕಾರಿಗಳ ಪ್ರಕಾರ, ಅಮೆರಿಕ ಸರಕುಗಳ ಮೇಲಿನ ತನ್ನ ಶೇ.125% ಸುಂಕವನ್ನು ಶೇ.10ಕ್ಕೆ ಇಳಿಸುವುದಾಗಿ ಹೇಳಿದೆ ಎಂದು ಹೇಳಲಾಗಿದೆ. ಉಭಯ ದೇಶಗಳ ನಡುವಿನ ಸುಂಕ ಕಡಿತವು ಈಗ ತಾತ್ಕಾಲಿಕವಾಗಿದೆ ಮತ್ತು ಕನಿಷ್ಠ ಮುಂದಿನ 90 ದಿನಗಳವರೆಗೆ ತಕ್ಷಣವೇ ಜಾರಿಯಲ್ಲಿರುತ್ತದೆ ಎಂದು ಅಮೆರಿಕ -ಚೀನಾ ಅಧಿಕಾರಿಗಳು ಹೇಳಿದ್ದಾರೆ.