PARENTING | ನಿಮ್ಮ ಮಗುವಿಗೆ ಸಿಪ್ಪರ್ ಕೊಡ್ತಿದ್ದಿರಾ? ಖರೀದಿಗೂ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿರುವ ಮಗುವಿಗೆ ಸಿಪ್ಪರ್ ಅನ್ನು ನೀಡುವುದು ಮಾಮೂಲಾಗಿದೆ. ಇದರ ಜೊತೆಗೆ ಮಕ್ಕಳಿಗೂ ಕೂಡ ಇದರಲ್ಲಿ ನೀರು, ಹಾಲು ಕುಡಿಯೋದಕ್ಕೂ ಬಹಳ ಸುಲಭ. ಆದರೆ ನಿಮ್ಮ ಮಕ್ಕಳಿಗೆ ನೀವು ಸರಿಯಾದ ಸಿಪ್ಪರ್ ಆಯ್ಕೆ ಮಾಡದಿದ್ದರೆ ಕುಡಿಯುವಾಗ ಸಮಸ್ಯೆಗಳನ್ನು ಉಂಟುಮಾಡುವುದರ ಜೊತೆಗೆ ಹಲ್ಲುಗಳ ಬೆಳವಣಿಗೆಗೆ ಅಡ್ಡಿಯಾಗಬಹುದು. ಇವತ್ತು ಸಿಪ್ಪರ್ ಖರೀದಿಸುವಾಗ ಯಾವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿದುಕೊಳ್ಳೋಣ.

ವಯಸ್ಸಿಗೆ ತಕ್ಕ ಸಿಪ್ಪರ್
ಮಗುವಿನ ವಯಸ್ಸಿಗೆ ಅನುಗುಣವಾಗಿ ಸರಿಯಾದ ಸಿಪ್ಪರ್ ಅನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಆರಂಭದಲ್ಲಿ ಮೃದುವಾದ ಸಿಪ್ಪರ್‌ಗಳು 6 ತಿಂಗಳ ಮೇಲ್ಪಟ್ಟ ಶಿಶುಗಳಿಗೆ ಒಳ್ಳೆಯದು. ಏಕೆಂದರೆ ಇದು ಹಲ್ಲಿನ ಬೆಳವಣಿಗೆಯ ಸಮಯದಲ್ಲಿ ಮೃದುವಾದ ಸಿಪ್ಪರ್ ಜಗಿಯುವುದರಿಂದ ಮಗುವಿಗೆ ಆಗುವ ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗುಣಮಟ್ಟ
ಬಿಸ್ಫೆನಾಲ್ ಎ ಫ್ರೀ ಸಿಪ್ಪರ್‌ಗಳನ್ನು ಖರೀದಿಸುವುದು ಉತ್ತಮ. ಏಕೆಂದರೆ ಬಿಸ್ಫೆನಾಲ್ ಎ ಒಂದು ಹಾನಿಕಾರಕ ರಾಸಾಯನಿಕವಾಗಿದ್ದು, ಇದು ಪ್ಲಾಸ್ಟಿಕ್‌ನಲ್ಲಿ ಕಂಡುಬರುತ್ತದೆ ಮತ್ತು ಮಗುವಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಯಾವುದೇ ವಸ್ತುವನ್ನು ಆಯ್ಕೆಮಾಡುವಾಗ ಗುಣಮಟ್ಟವನ್ನು ಪರಿಶೀಲಿಸುವುದು ನಮಗೆ ಬಹಳ ಮುಖ್ಯ.

ಸ್ವಚ್ಛತೆ
ಸುಲಭವಾಗಿ ತೆರೆದು ಸ್ವಚ್ಛಗೊಳಿಸಬಹುದಾದ ಸಿಪ್ಪರ್ ಅನ್ನು ಆರಿಸಿ. ಕಷ್ಟಕರ ಡಿಸೈನ್ ಹೊಂದಿರುವ ಸಿಪ್ಪರ್‌ಗಳು ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತವೆ. ಸಿಪ್ಪರ್‌ನ ಎಲ್ಲಾ ಭಾಗಗಳು ಬೇರ್ಪಡಿಸಬಹುದೇ ಎಂದು ನೋಡಿ ಖರೀದಿಸಿ.ಇದರಿಂದ ಅವುಗಳನ್ನು ತೊಳೆಯಲು ಅನುಕೂಲ.

ಸಿಪ್ಪರ್‌ನ ಗಾತ್ರ ಮತ್ತು ಹಿಡಿಕೆ
ಸಿಪ್ಪರ್ ಗಳು ಚಿಕ್ಕ ಮಕ್ಕಳ ಕೈಗಳಿಗೆ ಆರಾಮದಾಯಕವಾಗಿ ಹಿಡಿದುಕೊಳ್ಳುವಂತಿರಬೇಕು. ಹಿಡಿಕೆಗಳನ್ನು ಹೊಂದಿರುವ ಸಿಪ್ಪರ್‌ಗಳನ್ನು ಶಿಶುಗಳು ಹಿಡಿದಿಟ್ಟುಕೊಳ್ಳುವುದು ಸುಲಭ. ಸಿಪ್ಪರ್‌ನ ಗಾತ್ರ ಕೂಡ ಮಗುವು ಅದನ್ನು ಸುಲಭವಾಗಿ ಎತ್ತುವಂತಿರಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!