ಹೊಸದಿಗಂತ ವರದಿ ವಿಜಯಪುರ:
ಭಾರತದ ದಾಳಿಯಿಂದ ಪಾಪಿ ಪಾಕಿಸ್ತಾನ ಅಮೆರಿಕಾ, ವಿಶ್ವಸಂಸ್ಥೆ ಕಾಲು ಹಿಡಿದು ನಾಟಕ ಮಾಡುತ್ತಿದೆ. ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಜವಹರಲಾಲ್ ನೆಹರು ಮಾಡಿದ ತಪ್ಪನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಬಾರದು. ಪಾಕಿಸ್ತಾನ ಸರ್ವನಾಶ ಮಾಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಿ ಎಂದು ಕರ್ನಾಟಕದ ಯಾರ ಬಳಿಯೂ ನಾನು ಹೋಗಿಲ್ಲ. ನಾನು ಈ ಹಿಂದೆ ಕೂಡ ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಸ್ಥಾನಕ್ಕಾಗಿ ಚುನಾವಣೆ ಮಾಡಿಲ್ಲ. ದೇಶದ ಸಲುವಾಗಿ, ಪ್ರಧಾನಿ ಮೋದಿ ಅವರ ಸಲುವಾಗಿ ಚುನಾವಣೆ ಮಾಡಿರುವೆ ಎಂದರು.
ವಿಜಯಪುರ ಮತಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಲೀಡ್ ಆಗಲು ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಕಾರಣ. ಆತ ಸ್ಥಳೀಯ ಎಂಬ ಕಾರಣಕ್ಕೆ ಹೆಚ್ಚಿನ ಜನ ಮತ ಹಾಕಿದ್ದಾರೆ. ಇಷ್ಟು ದಿನ ಬಿಟ್ಟು ಜಿಗಜಿಣಗಿ ಅವರು ಈಗ ಮಾತನಾಡುತ್ತಾರೆ. ನನಗೆ ಶಾಶ್ವತ ಹೊರಗೆ ಹಾಕಲಾಗಿದೆ ಎಂದು ಅವರು ತಿಳಿದುಕೊಂಡಿದ್ದಾರೆ. ಕೆಲವರಿಗೆ ಹುಚ್ಚು ಹಿಡಿದಿದೆ, ನನಗೆಂದೂ ವಾಪಸ್ ತಗೆದುಕೊಳ್ಳಲ್ಲ ಅಂದುಕೊಂಡಿದ್ದಾರೆ. ಮೇಲಿನವರು ನನಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಿದ ಬಳಿಕ ತಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂದರು.