ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಆಪರೇಷನ್ ಸಿಂದೂರ ಕಾರ್ಯಾಚರಣೆಯಡಿ ನಡೆಸಿದ ದಾಳಿ ಪಾಕಿಸ್ತಾನದ ಕಿರಾನ್ ಹಿಲ್ಸ್ ನಲ್ಲಿರುವ ಪರಮಾಣು ಸ್ಥಾವರಗಳ ಮೇಲೆ ದಾಳಿ ಮಾಡಿತ್ತೇ? ಎಂಬ ಊಹಾಪೋಹಗಳಿಗೆ ಮಹಾನಿರ್ದೇಶಕ ಏರ್ ಮಾರ್ಷಲ್ ಎಕೆ ಭಾರ್ತಿ ಉತ್ತರ ನೀಡಿದ್ದಾರೆ.
ಮಾಧ್ಯಮದ ಪ್ರತಿನಿಧಿಯೊಬ್ಬರು, ಪಾಕಿಸ್ತಾನ ಅಣ್ವಸ್ತ್ರ ಸಂಗ್ರಹ ಇರುವ ಕಿರಾನಾ ಬೆಟ್ಟದ ಮೇಲೆ ಭಾರತ ದಾಳಿ ನಡೆಸಿದೆ ಎಂದು ಚರ್ಚೆ ನಡೆಯುತ್ತಿದೆ. ಹೀಗಾಗಿ ಆ ಜಾಗದ ಮೇಲೆ ದಾಳಿ ನಡೆದಿದ್ಯಾ ಎಂದು ಪ್ರಶ್ನೆ ಮಾಡಿದರು.
ಈ ಪ್ರಶ್ನೆಗೆ ಎಕೆ ಭಾರ್ತಿ, ಕಿರಾನಾ ಬೆಟ್ಟದಲ್ಲಿ ಪರಮಾಣು ಸ್ಥಾವರವಿದೆ ಎಂದು ತಿಳಿಸಿದ್ದಕ್ಕೆ ಧನ್ಯವಾದಗಳು. ನಮಗೆ ಈ ವಿಚಾರ ತಿಳಿದಿರಲಿಲ್ಲ ಎಂದು ಉತ್ತರಿಸಿದರು. ಮುಂದುವರಿದು ಕಿರಾನಾ ಬೆಟ್ಟದ ಮೇಲೆ ನಾವು ಯಾವುದೇ ದಾಳಿ ಮಾಡಿಲ್ಲ. ಅಲ್ಲಿ ಏನಿದೆ ಎನ್ನುವುದು ಗೊತ್ತಿಲ್ಲ ಎಂದರು.
ಸರ್ಗೋಧಾದ ಮುಶಾಫ್ ವಾಯುನೆಲೆಯಲ್ಲಿ ಭಾರತ ಧ್ವಂಸಗೊಳಿಸಿರುವುದಾಗಿ ಭಾರತ ಹೇಳಿಕೆ ನೀಡುತ್ತಿರುವಂತೆಯೇ ಸರ್ಗೋಧಾ ಜಿಲ್ಲೆಯ ಕಿರಾನಾ ಹಿಲ್ಸ್ ಕೆಳಗಿರುವ ಭೂಗತ ಪರಮಾಣು ಹಾಗೂ ಯುದ್ದೋಪಕರಣಗಳ ಸಂಗ್ರಹಗಾರ ಮೇಲೂ ಭಾರತ ದಾಳಿ ನಡೆಸಲಾಗಿದೆ ಎಂದು ವರದಿಯಾಗಿತ್ತು.
ಕಿರಾನಾ ಹಿಲ್ಸ್ ಸರ್ಗೋದಾ ಜಿಲ್ಲೆಯಲ್ಲಿರುವ ಒಂದು ವಿಶಾಲವಾದ ಪರ್ವತ ಶ್ರೇಣಿಯಾಗಿದ್ದು, ಪಾಕಿಸ್ತಾನದ ರಕ್ಷಣಾ ಸಚಿವಾಲಯದ ಸುಪರ್ದಿಯಲ್ಲಿದೆ. ಕಂದುಬಣ್ಣದ ಭೂಪ್ರದೇಶದಿಂದಾಗಿ ಸ್ಥಳೀಯವಾಗಿ ಇದು “ಕಪ್ಪು ಪರ್ವತಗಳು” ಎಂದು ಕರೆಯಲಾಗುತ್ತದೆ, ಇದು ರಬ್ವಾಹ್ ಮತ್ತು ಸರ್ಗೋಧಾ ನಗರದ ನಡುವೆ ಹರಡಿಕೊಂಡಿದೆ.
ಪಾಕಿಸ್ತಾನದ ವಾಯು ರಕ್ಷಣಾ ರಾಡಾರ್‌ಗಳು, ಏರ್‌ಫೀಲ್ಡ್‌ಗಳು ಮತ್ತಿತರ ಮಿಲಿಟರಿ ನೆಲೆಗಳಲ್ಲಿ ವ್ಯಾಪಕ ಹಾನಿಯನ್ನು ವಿಡಿಯೋ ಸಾಕ್ಷ್ಯ ಮೂಲಕ ವಿವರಿಸಿದ ಎಕೆ ಭಾರ್ತಿ ಅವರು, ಸೇನಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ಭಾರತೀಯ ಪಡೆಗಳ ಸನ್ನದ್ಧತೆ ಮತ್ತು ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು.