ಮೇಷ
ಜಡತ್ವ ಬಿಟ್ಟು ವ್ಯವಹರಿಸಿ. ನಿಮ್ಮ ಕಾರ್ಯವನ್ನು ಇತರರಿಗೆ ವಹಿಸಿಕೊಡಬೇಡಿ. ಆರ್ಥಿಕ ಸಂಕಷ್ಟ ನಿವಾರಣೆ. ವಸ್ತು ಖರೀದಿ.
ವೃಷಭ
ಮನೆ ಕೆಲಸದಲ್ಲಿ ಹೆಚ್ಚು ಜವಾಬ್ದಾರಿ.ಚಾಡಿ ಮಾತುಗಳಿಗೆ ಕಿವಿ ಕೊಡಬೇಡಿ. ಇತರರ ಉಸಾಬರಿಗೆ ನೀವೂ ತಲೆಹಾಕಬೇಡಿ.
ಮಿಥುನ
ಕುಟುಂಬ ಸದಸ್ಯರ ಜತೆ ಭಿನ್ನಮತ. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಕಾಡುವ ಚಿಂತೆಗೆ ಪರಿಹಾರ ಇಂದು ಸಿಗಲಿದೆ.
ಕಟಕ
ಒತ್ತಡದಿಂದ ಹೊರಬಂದು ಮೆಚ್ಚಿನ ಹವ್ಯಾಸದಲ್ಲಿ ತೊಡಗಿ. ಇತರರ ಸಂತೋಷದಲ್ಲಿ ನೀವು ತೃಪ್ತಿ ಪಡೆಯುವಿರಿ. ಕೌಟುಂಬಿಕ ನೆಮ್ಮದಿ.
ಸಿಂಹ
ಕಷ್ಟ ಎದುರಾದರೂ ಅದಕ್ಕೆ ಪರಿಹಾರವೂ ದೊರಕುವುದು. ಹಾಗಾಗಿ ಹೆಚ್ಚು ಚಿಂತೆ ಅನವಶ್ಯ. ಬಿಕ್ಕಟ್ಟು ನಿವಾರಣೆಗೆ ಆತ್ಮೀಯರ ಸಹಕಾರ.
ಕನ್ಯಾ
ಮನೆಯ ಸದಸ್ಯರ ಜತೆ ಸಂವಹನ ಕೊರತೆ. ಬಾಂಧವ್ಯದಲ್ಲಿ ಬಿಕ್ಕಟ್ಟು. ಪ್ರತಿಕೂಲ ಪರಿಸ್ಥಿತಿಗೆ ಎದೆಗುಂದದಿರಿ. ಖರ್ಚು ಹೆಚ್ಚಲಿದೆ.
ತುಲಾ
ಕೌಟುಂಬಿಕ ವ್ಯವಹಾರಕ್ಕೆ ಇಂದು ಹೆಚ್ಚು ಗಮನ ಕೊಡಿ. ಇತರ ಒತ್ತಡಗಳಿಂದ ವಿಮುಖರಾಗಿರಿ. ವೃತ್ತಿಯಲ್ಲಿ ಮಿಶ್ರ ಫಲ.
ವೃಶ್ಚಿಕ
ಯಾವುದೇ ವಿಚಾರದಲ್ಲಿ ನಿಮ್ಮ ನಿಲುವಿಗೇ ಅಂಟಿಕೊಳ್ಳುವ ಜಿಗುಟುತನ ಬಿಡಿ. ಕೆಲ ವಿಚಾರಗಳಲ್ಲಿ ಹೊಂದಾಣಿಕೆ ಒಳಿತು.
ಧನು
ಕೌಟುಂಬಿಕ ಸಂಬಂಧ ಉತ್ತಮ. ಭಿನ್ನಮತ ನಿವಾರಣೆ. ವೃತ್ತಿಯಲ್ಲಿ ಕಂಡುಬಂದ ಕಾಡುತ್ತಿರುವ ಬಿಕ್ಕಟ್ಟಿಗೆ ಪರಿಹಾರ ಸಿಗಲಿದೆ.
ಮಕರ
ಸಾಂಸಾರಿಕವಾಗಿ ತುಸು ಉದ್ವಿಗ್ನತೆ ಉಂಟಾದೀತು. ಸಹನೆಯಿಂದ ನಿಭಾಯಿಸಿ. ಮಾತಿಗೆ ಮಾತು ಬೆಳೆಸಿದರೆ ಶಾಂತಿ ಕದಡಬಹುದು.
ಕುಂಭ
ಮನೆಯಲ್ಲಿ ಶಾಂತಿ, ಸೌಹಾರ್ದ. ವೃತ್ತಿಯಲ್ಲಿ ಕೂಡ ಸಮಾಧಾನದ ಬೆಳವಣಿಗೆ. ನಿಮ್ಮ ಕೆಲಸವು ಇತರರಿಂದ ಮೆಚ್ಚುಗೆ ಪಡೆಯುವುದು.
ಮೀನ
ಕಠಿಣ ಹೊಣೆಗಾರಿಕೆ ನಿಮ್ಮ ಮೇಲೆ ಬೀಳಲಿದೆ. ಬಂಧುಗಳ ಸಹಕಾರದಿಂದ ಕಾರ್ಯ ಪ್ರಾಪ್ತಿ. ಹಣದ ಬಿಕ್ಕಟ್ಟು ಪರಿಹಾರ.