ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ತಾತ್ಕಾಲಿಕವಾಗಿ ರದ್ದುಗೊಂಡಿದ್ದ 2025ರ ಆವೃತ್ತಿಯ IPL ಮೇ 17 ರಿಂದ ಪುನರಾರಂಭವಾಗಲಿದೆ ಎಂದು ಬಿಸಿಸಿಐ ಸ್ಙಷ್ಟಪಡಿಸಿದೆ.
ನಿನ್ನೆ (ಮೇ 12) ತಡಾರಾತ್ರಿ ಈ ಆದೇಶ ಹೊರಿಡಿಸಿರುವ ಬಿಸಿಸಿಐ ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಮಾತ್ರವಲ್ಲ ಉಳಿದ 17 ಪಂದ್ಯಗಳು 6 ವಿವಿಧ ಮೈದಾನಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮೇ 17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿವೆ. ಮೇ 27 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುವ ಮೂಲಕ ಲೀಗ್ ಹಂತಕ್ಕೆ ತೆರೆಬೀಳಲಿದೆ.
ಇನ್ನೂ ಮೇ 29 ರಂದು ಕ್ವಾಲಿಫೈಯರ್ 1, ಮೇ 30 ರಂದು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ ಹಾಗೂ ಜೂನ್ 1ರಂದು ಕ್ವಾಲಿಫೈಯರ್-1 ಮತ್ತು ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ.