ಬೇಸಿಗೆ ಕಾಲದಲ್ಲಿ ತೀವ್ರ ತಾಪಮಾನ, ಬಿಸಿಲಿನ ಕಿರಣಗಳು, ಧೂಳು, ಹೊಳಪು ಕಡಿಮೆಮಾಡುವ ರಾಸಾಯನಿಕ ಶ್ಯಾಂಪೂಗಳ ಬಳಕೆ ಕೂದಲಿಗೆ ಹಾನಿಕಾರಕವಾಗಬಹುದು. ಈ ಸಮಯದಲ್ಲಿ ಕೂದಲು ಒಣಗುವುದು, ತುದಿಗಳ ಒಡೆತ, ಉದುರುವುದು ಹಾಗೂ ಹೊಳಪು ಕಳೆದುಕೊಳ್ಳುವುದು ಸಾಮಾನ್ಯ. ಕೂದಲು ತಂಪಾಗಿ, ಆರ್ದ್ರತೆಯಿಂದ ಕೂಡಿದಂತೆ ಹಾಗೂ ಆರೋಗ್ಯಪೂರ್ಣವಾಗಿ ಉಳಿಸಿಕೊಳ್ಳಲು ನೈಸರ್ಗಿಕ ಮನೆಮದ್ದುಗಳು ಅತ್ಯುತ್ತಮ ಪರಿಹಾರ.
ಅಲೋವೆರಾ ಮತ್ತು ತುಪ್ಪದ ಮಾಸ್ಕ್
ಅಲೋವೆರಾ ಮತ್ತು ತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಿ, ಕೂದಲಿನ ಬುಡದಿಂದ ತುದಿವರೆಗೆ ಹಚ್ಚಿ. 30 ನಿಮಿಷ ಬಿಡಿ ನಂತರ ಸೌಮ್ಯ ಶ್ಯಾಂಪೂ ಮೂಲಕ ತೊಳೆಯಿರಿ.
ಅಲೋವೆರಾ ತಲೆಯ ಚರ್ಮಕ್ಕೆ ತಂಪು ನೀಡುತ್ತದೆ, ತ್ವಚೆಯ ಒಣಗುವಿಕೆಯನ್ನು ತಗ್ಗಿಸುತ್ತದೆ. ತುಪ್ಪ ಕೂದಲಿಗೆ ತೇವಾಂಶ ನೀಡುವಂತೆ ಮಾಡುತ್ತದೆ ಹಾಗೂ ಬಿಸಿಲಿನಿಂದ ಕೂದಲಿಗೆ ಪೋಷಣೆ ನೀಡುತ್ತದೆ.
ನಿಂಬೆಹಣ್ಣು ಮತ್ತು ಮೆಂತ್ಯೆ ಮಾಸ್ಕ್
2 ಟೇಬಲ್‌ಸ್ಪೂನ್ ಮೆಂತ್ಯೆ ,1 ಟೀ ಸ್ಪೂನ್ ನಿಂಬೆ ರಸ, 2 ಟೇಬಲ್‌ಸ್ಪೂನ್ ಮೊಸರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ನಂತರ ಇದನ್ನು ಕೂದಲಿಗೆ ಹಚ್ಚಿ 20–30 ನಿಮಿಷ ಬಿಟ್ಟು ತಣ್ಣಗಿನ ನೀರಿನಿಂದ ತೊಳೆಯಿರಿ.
ಮೆಂತ್ಯೆ ತಂಪು ನೀಡುತ್ತದೆ, ನಿಂಬೆಹಣ್ಣು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ. ಮೊಸರು ಕೂದಲಿಗೆ ತೇವಾಂಶ ನೀಡುತ್ತದೆ ಮತ್ತು ಒರಟುತನ ಕಡಿಮೆಮಾಡುತ್ತದೆ.
ಬಾಳೆಹಣ್ಣು ಮತ್ತು ಜೇನುತುಪ್ಪದ ಮಾಸ್ಕ್
1 ಬಾಳೆಹಣ್ಣು, 1 ಟೇಬಲ್‌ಸ್ಪೂನ್ ಜೇನುತುಪ್ಪ,1 ಟೇಬಲ್‌ಸ್ಪೂನ್ ಮೊಸರನ್ನು ಚೆನ್ನಾಗಿ ಮಿಶ್ರಣ ಮಾಡಿ, ಕೂದಲು ಮತ್ತು ತಲೆಯ ಬುಡಕ್ಕೆ ಹಚ್ಚಿ. 30 ನಿಮಿಷ ಬಿಡಿ. ಬಳಿಕ ಶಾಂಪೂ ಮತ್ತು ತಣ್ಣಗಿನ ನೀರಿನಿಂದ ತೊಳೆಯಿರಿ.
ಬಾಳೆಹಣ್ಣು ಕೂದಲಿಗೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ, ಒರಟು ಮತ್ತು ಒಣ ಕೂದಲನ್ನು ನಯಗೊಳಿಸುತ್ತದೆ. ಜೇನುತುಪ್ಪ ಒಂದು ನೈಸರ್ಗಿಕ ಆಂಟಿಸೆಪ್ಟಿಕ್ ಆಗಿದ್ದು ತ್ವಚೆಗೆ ಶುದ್ಧತೆ ನೀಡುತ್ತದೆ. ಮೊಸರು ತೇವಾಂಶ ನೀಡುತ್ತದೆ.