ಸುಮಾರು ಒಂದು ದಶಕದ ನಂತರ ಗೂಗಲ್ ಮೊದಲ ಬಾರಿಗೆ ತನ್ನ ಐಕಾನಿಕ್ ‘G’ ಲೋಗೋವನ್ನು ನವೀಕರಿಸಿದೆ. ಹೊಸ ಲೋಗೋ ನಲ್ಲಿ ತನ್ನ ಹಳೆಯ G ಸ್ಯಾನ್ಸ್ ಫಾರ್ಮೆಟ್ ನಲ್ಲಿದ್ದರೂ ಬಣ್ಣಗಳಲ್ಲಿ ಗಮನಾರ್ಹ ಬದಲಾವಣೆ ಮಾಡಿದೆ.
ಹಳೆಯ ಲೋಗೋ ನಾಲ್ಕು ಬಣ್ಣಗಳನ್ನು (ಕೆಂಪು, ಹಳದಿ, ಹಸಿರು ಮತ್ತು ನೀಲಿ) ಒಳಗೊಂಡಿದ್ದರೆ, ಹೊಸದು ಬಣ್ಣಗಳನ್ನು ಹೆಚ್ಚು ಸಾವಯವವಾಗಿ ಸಂಯೋಜಿಸುವ ಗ್ರೇಡಿಯಂಟ್ ವಿನ್ಯಾಸವನ್ನು (ಬಣ್ಣಗಳ ಮಿಶ್ರಣ) ಬಳಸಲಾಗಿದೆ. ಬಣ್ಣ ವಿತರಣೆ (color spread) ಮತ್ತು ಗ್ರೇಡಿಯಂಟ್ ಮಿಶ್ರಣವು ಹೊಸ ಲೋಗೋವನ್ನು ಹೆಚ್ಚು ಸಮತೋಲಿತವಾಗಿ ಕಾಣುವಂತೆ ಮಾಡುತ್ತದೆ.
ಗೂಗಲ್ ಲೋಗೋ ಕೊನೆಯದಾಗಿ ನವೀಕರಣಗೊಂಡಿದ್ದು 2015 ರಲ್ಲಿ. ಆಗ ಕಂಪನಿಯು ಡೆಸ್ಕ್‌ಟಾಪ್ ಸರ್ಚ್ ಇಂಜಿನ್‌ನಿಂದ ವಿವಿಧ ಸಾಧನಗಳಲ್ಲಿ, ವಿಶೇಷವಾಗಿ ಮೊಬೈಲ್ ಫೋನ್‌ಗಳಲ್ಲಿ ವಿವಿಧ ಪ್ಲಾಟ್‌ಫಾರ್ಮ್‌ಗಳನ್ನು ನೀಡುವ ವಿಶಾಲ ಬದಲಾವಣೆಯನ್ನು ಮಾಡಿತ್ತು. ಜೊತೆಗೆ ನೀಲಿ ಹಿನ್ನೆಲೆಯಲ್ಲಿ ಸಣ್ಣ ಅಕ್ಷರದ ‘g’ ಅನ್ನು ನಾಲ್ಕು ಬಣ್ಣಗಳನ್ನು ಒಳಗೊಂಡ ವೃತ್ತಾಕಾರದ ಲೋಗೋದೊಂದಿಗೆ ಬದಲಾಯಿಸಿತು.
9to5Google ವರದಿಯ ಪ್ರಕಾರ, ಈ ನವೀಕರಣವನ್ನು ಪ್ರಸ್ತುತ Google ಹುಡುಕಾಟ ಅಪ್ಲಿಕೇಶನ್ ಮೂಲಕ iOS ಬಳಕೆದಾರರಿಗೆ ಬಿಡುಗಡೆ ಮಾಡಲಾಗುತ್ತಿದೆ ಮತ್ತು Google ಅಪ್ಲಿಕೇಶನ್ ಬೀಟಾ ಆವೃತ್ತಿ 16.18 ಬಿಡುಗಡೆಯೊಂದಿಗೆ Android ಸಾಧನಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ.