ಹೊಸದಿಗಂತ ವಿಜಯಪುರ:
ಭಾರತೀಯ ಸೈನಿಕರು ಪಾಕಿಸ್ತಾನವನ್ನು ಎರಡು ಬಾರಿ ಸೋಲಿಸಿದ್ದು, ಮೂರನೇ ಬಾರಿ ಸೋಲಿಸುವುದು ಏನು ದೊಡ್ಡ ಕಷ್ಟವಲ್ಲ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಾಕಿಸ್ತಾನ ವಿರುದ್ಧ, ಕದನ ವಿರಾಮ ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಅಮೆರಿಕ ಮಧ್ಯಪ್ರವೇಶಿಸಿದ್ದು ಸರಿಯಲ್ಲ. ಪಾಕಿಸ್ತಾನದ ವಿರುದ್ಧದ ಕದನ ವಿರಾಮ ಉಲ್ಲಂಘನೆ ವಿಚಾರದಲ್ಲಿ ಸರ್ವಪಕ್ಷ ನಿಯೋಗ ಪ್ರಧಾನಿಗಳಿಗೆ ಒತ್ತಾಯ ಮಾಡಿದರು. ಸೀಸ್ ಫೈರ್ ಮಾಡುವುದಾದರೆ ಅಧಿವೇಶ ಕರೆಯಬೇಕು, ಸೀಸ್ ಫೈರ್ ಮಾಡದಿದ್ದರೆ ಅಧಿವೇಶನ ಕರೆಯಬೇಡಿ. ಇಲ್ಲದಿದ್ದರೆ ಯುದ್ದವನ್ನಾದರೂ ಮಾಡಿ ಎಂದರು.
ಯಾವುದೇ ಒಂದು ನಿಷ್ಕರ್ಷಕ್ಕೆ ಬರದೇ, ಬೇರೆ ಯಾರೋ ಹೇಳಿದರೆ ಅದಕ್ಕೊಂದು ಕಂಡಿಷನ್ ಇರಬೇಕು ಎಂದರು.
ಅಮೆರಿಕದವರು ಇಂಟರ್ ಫಿಯರ್ ಮಾಡಿದ್ದಾರೆ. ಕಾಶ್ಮೀರ ವಿಷಯ ಇಟ್ಟುಕೊಂಡು ನಿಮ್ಮ ಇಂಟರ್ ಫೈರ್ ಮಾಡುವುದಾದರೆ ಸೀಸ್ ಫೈರ್ ಮಾಡಬಾರದಿತ್ತು. ಷರತ್ತು ರಹಿತವಾಗಿದ್ದರೆ ಮಾತ್ರ ಯುದ್ಧ ವಿರಾಮ ಘೋಷಿಸುವ ಮಾತುಕತೆಗೆ ಬರುತ್ತೇವೆ ಎಂದಿದ್ದರೆ ಅದು ಸೂಕ್ತವಾಗಿತ್ತು. ಅದನ್ನೆ ವಿರೋಧ ಪಕ್ಷದವರು, ದೇಶದ ಜನ ಕೇಳುತ್ತಿರುವುದು ಎಂದರು.
ಸರ್ವ ಪಕ್ಷಗಳ ಸಭೆ ಕರೆದಲ್ಲಿ, ಸಭೆಯಲ್ಲಿ ಅನೇಕ ವಿಷಯ ಚರ್ಚೆ ಆಗಲಿವೆ. ಆದರೆ ಮೋದಿ ಅವರು ಸಮರ್ಪಕ ಉತ್ತರ ಕೊಟ್ಟರೆ ಎಲ್ಲರೂ ಒಪ್ಪಿಕೊಳ್ಳಬಹುದು, ಇರದಿದ್ದರೆ ವಿಮರ್ಶೆ ಆಗಬಹುದು ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಸೀಸ್ ಫೈರ್ ಮಾಡುವುದಾದರೆ ಅಧಿವೇಶನ ಕರೆಯಿರಿ, ಯುದ್ಧ ಮುಂದುವಸಿದರೆ ಸಭೆ ಕರೆಯುವ ಅವಶ್ಯಕತೆ ಇಲ್ಲ ಎಂದರು.