ಟೆಂಪೋ ಟ್ರಾವೆಲರ್ ವಾಹನಕ್ಕೆ ಕಾರು ಡಿಕ್ಕಿ: 9 ಮಂದಿಗೆ ಗಂಭೀರ ಗಾಯ

ಹೊಸದಿಗಂತ ಅಂಕೋಲಾ:

ಕಾರೊಂದು ಟೆಂಪೋ ಟ್ರಾವೆಲರ್ ವಾಹನಕ್ಕೆ ಡಿಕ್ಕಿ ಹೊಡೆದು ಒಟ್ಟು 9 ಜನರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ನವಗದ್ದೆ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದೆ.

ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಜಿ.ಎ10 ಎ1214 ನೋಂದಣಿ ಸಂಖ್ಯೆಯ ಕಾರು ಚಾಲಕ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಮುಂದಿನ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಕೆ.ಎ25 ಡಿ1408 ಟಿ.ಟಿ ವಾಹನಕ್ಕೆ ಡಿಕ್ಕಿ ಹೊಡೆದು ಟಿ.ಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಹೈದರಾಬಾದ್ ನಿವಾಸಿಗಳಾದ ಅನುಷಾ ರಾಮು ವಡ್ಡಲಪು(33) ನೀರಜಾ ಲಕ್ಷ್ಮೀನಾರಾಯಣ ಗೋದಾರಿ(46) ದೀಪಿಕಾ ಚಂದ್ರಶೇಖರ ವರುಗಂಟಿ(35) ಸಂಧ್ಯಾ ಕೃಷ್ಣ ಕುರೆಲ್ಲಾ(32) ಅನಸೂಜಾ ಶ್ರೀನಿವಾಸಂ ಪಟ್ನಂ(40) ಗಾಯತ್ರಿ ಮಲ್ಲೇಶ ಚಿಟಿಯಾಲ(28) ಇವರು ಗಾಯಗೊಂಡಿದ್ದು ಕಾರಿನಲ್ಲಿದ್ದ ಕಾರವಾರ ಕಿನ್ನರ ನಿವಾಸಿ ರಾಧಿಕಾ ರಾಜನ್ ಆಚಾರ್ಯ(32) ರೋಹಿತ್ ರಾಜನ್ ಆಚಾರ್ಯ (11) ಮತ್ತು ಕಾರವಾರ ಶಿರವಾಡ ನಿವಾಸಿ ರೇಷ್ಮಾ ರಮೇಶ ಆಚಾರಿ(55) ಅವರಿಗೆ ಸಹ ಗಾಯಗಳಾಗಿವೆ.

ಪಿ.ಎಸ್. ಐ ಸುನೀಲ ಹುಲ್ಲೋಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಾರು ಚಾಲಕನ ಮೇಲೆ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!