ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕೋಮಲ್ ಕುಮಾರ್ ಕಾಲಿವುಡ್ ಗೆ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. ಆದರೆ ಅದು ಬರಿ ಎಂಟ್ರಿ ಅಲ್ಲ ಅಂತಿದ್ದಾರೆ ಫ್ಯಾನ್ಸ್. ಹೌದು! ಕೋಮಲ್ ಫಸ್ಟ್ ಟೈಮ್ ತಮಿಳು ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಶಿವಾಜಿ ಪ್ರಭು ಅವರ ಜೊತೆಗೆ ಸ್ಕ್ರೀನ್ ಹಂಚಿಕೊಂಡಿದ್ದಾರೆ.
ಜೈಲರ್ ಚಿತ್ರದಲ್ಲಿ ಶಿವಣ್ಣನ ಎಂಟ್ರಿ ಹೇಗಿತ್ತೋ ಅದೇ ರೀತಿನೇ ಕೋಮಲ್ ಪಾತ್ರಕ್ಕೂ ‘ರಾಜಪುತ್ರನ್’ ಚಿತ್ರದಲ್ಲಿ ಮಹತ್ವ ಕೊಡಲಾಗಿದೆ. ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದ್ದು, ಟೀಸರ್ ಅಲ್ಲಿ ಕೋಮಲ್ ಪಾತ್ರದ ಖದರ್ ಏನೂ ಅನ್ನೋದು ರಿವೀಲ್ ಆಗಿದೆ. ಟೀಸರ್ ನೋಡಿರೋ ಕೋಮಲ್ ಅಭಿಮಾನಿಗಳು ತಮ್ಮ ನಟನ ಹೊಸ ಅವತಾರ ನೋಡಿ ಮೆಚ್ಚಿಕೊಂಡಿದ್ದಾರೆ.
ರಾಜಪುತ್ರನ್ ಚಿತ್ರವನ್ನ ಮಹಾ ಕಂಧನ್ ಡೈರೆಕ್ಷನ್ ಮಾಡಿದ್ದಾರೆ. ನವ್ಫಲ್ ರಾಜಾ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಈ ಚಿತ್ರವನ್ನ ಇದೇ ವರ್ಷ ರಿಲೀಸ್ ಮಾಡಲಾಗುತ್ತಿದೆ ಎನ್ನಲಾಗಿದೆ.