ಅರುಣಾಚಲದ ಕೆಲ ಪ್ರದೇಶಗಳಿಗೆ ಹೊಸ ಹೆಸರಿಡಲು ಯತ್ನಿಸಿದ ಚೀನಾ: ಬಿಲ್‌ಕುಲ್‌ NO ಎಂದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಮರುನಾಮಕರಣ ಮಾಡುವ ಚೀನಾದ ಪ್ರಯತ್ನಗಳನ್ನು ಭಾರತ ಬುಧವಾರ ಸಂಪೂರ್ಣವಾಗಿ ತಿರಸ್ಕರಿಸಿದೆ.

ಅವಿವೇಕದ ಪ್ರಯತ್ನಗಳು ಸಫಲವಾಗುವುದಿಲ್ಲ. ಅರುಣಾಚಲ ಪ್ರದೇಶ ರಾಜ್ಯವು ನಮ್ಮ ಜೊತೆ ಇದೆ ಮತ್ತು ಇರುತ್ತದೆ ಈ ವಾಸ್ತವವನ್ನು ಬದಲಾಯಿಸಲಾಗದು ಎಂದು ಹೇಳಿದೆ. ನೆರೆಯ ದೇಶವು ಟಿಬೆಟ್‌ನ ದಕ್ಷಿಣ ಭಾಗವೆಂದು ಹೇಳಿಕೊಳ್ಳುವ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಬೀಜಿಂಗ್ ಚೀನಾದ ಹೆಸರುಗಳನ್ನು ಘೋಷಿಸಿದ್ದಕ್ಕೆ ನವದೆಹಲಿಯಿಂದ ಈ ರೀತಿಯ ಪ್ರತಿಕ್ರಿಯೆ ಬಂದಿದೆ.

ಭಾರತದ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಹೆಸರಿಸಲು ಚೀನಾ ತನ್ನ ವ್ಯರ್ಥ ಮತ್ತು ಅಸಂಬದ್ಧ ಪ್ರಯತ್ನಗಳನ್ನು ಮುಂದುವರಿಸಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ನಮ್ಮ ತತ್ವಬದ್ಧ ನಿಲುವಿಗೆ ಅನುಗುಣವಾಗಿ, ನಾವು ಅಂತಹ ಪ್ರಯತ್ನಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಭಾಗವಾಗಿತ್ತು, ಈಗಲೂ ಇದೆ ಮತ್ತು ಯಾವಾಗಲೂ ಉಳಿಯುತ್ತದೆ ಎಂಬ ವಾಸ್ತವವನ್ನು ಬದಲಾಯಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!