ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರಾನ್ಸ್ ನಲ್ಲಿ ಮೇ 13 ರಿಂದ 24 ರವರೆಗೆ ನಡೆಯಲಿರುವ 78th Cannes Film Festival ನಲ್ಲಿ ಕನ್ನಡತಿ, ಲಕ್ಷ್ಮೀ ನಿವಾಸದ ಭಾವನಾ ಅಲಿಯಾಸ್ ದಿಶಾ ಮದನ್ ಪಾಲ್ಗೊಳ್ತಿದ್ದಾರೆ.
ತಮ್ಮ ಇನ್ಸ್ಟಾ ಖಾತೆಯಲ್ಲಿ ದಿಶಾ ಮದನ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅದ್ರಲ್ಲಿ ತಮ್ಮ ಬಾಲ್ಯ, ಡಾನ್ಸ್, ನಟನೆ ಬಗ್ಗೆ ಮಾತನಾಡಿದ ದಿಶಾ, ಕೊನೆಯಲ್ಲಿ ತಮಗೆ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ ಎನ್ನುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ದಿಶಾ ಈ ವಿಡಿಯೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ರೆಡ್ ಕಾರ್ಪೆಟ್ ನಲ್ಲಿ ನಿಮ್ಮನ್ನು ನೋಡೋಕೆ ನಾವು ಕಾತುರರಾಗಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾರ್ಚ್ 9, 1992ರಂದು ಜನಿಸಿದ ದಿಶಾ, ಸೋಶಿಯಲ್ ಮೀಡಿಯಾ ಸ್ಟಾರ್, ಟಿಕ್ ಟಾಕ್ ಕ್ವೀನ್, ಡಾನ್ಸರ್ ಹಾಗೂ ಕಿರುತೆರೆಯ ಪ್ರಸಿದ್ಧ ನಟಿ. ಕುಲವಧು ಸೀರಿಯಲ್ ಸೇರಿದಂತೆ ಅನೇಕ ಸೀರಿಯಲ್ ನಲ್ಲಿ ನಟಿಸಿದ್ದಾರೆ. ಜೊತೆಗೆ ಡಾನ್ಸ್ ಇಂಡಿಯಾ ಡಾನ್ಸ್, ಇಸ್ಮಾರ್ಟ್ ಸೂಪರ್ ಜೋಡಿ ಸೇರಿ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದರು.