ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲಿನಿಂದಲೂ ಪಾಕಿಗಳು ನಮ್ಮ ಕಾಶ್ಮೀರದ ಮೇಲೆ ಕಣ್ಣು ಇಟ್ಟಿರುವುದು ನಮಗೆಲ್ಲಾ ಗೊತ್ತಿದೆ. ಈಗಲೂ ಕೂಡ ಕಾಶ್ಮೀರವನ್ನು ಪಾಕ್ ಜೊತೆ ಸೇರಿಸಿಕೊಳ್ಳುವ ಹುನ್ನಾರ ನಡೆಯುತ್ತಲೇ ಇದೆ. ಈ ನಡುವೆ ಹಿಂದೆ ಪಾಕಿಸ್ತಾನವು ಭಾರತದ ಮುಂದೆ ಇಟ್ಟಿದ್ದ ಬೇಡಿಕೆಯೊಂದು ಈಗ ವೈರಲ್ ಆಗುತ್ತಿದೆ.
ಅಂದಹಾಗೆ ಪಾಕಿಸ್ತಾನ ಈ ಬೇಡಿಕೆ ಇಟ್ಟಿದ್ದು 1999ರಲ್ಲಿ. ಅಂದರೆ ಕಾರ್ಗಿಲ್ ಯುದ್ಧದ ಸಮಯದಲ್ಲಿ. ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಯಲ್ಲಿ ಕಾರ್ಗಿಲ್ ಯುದ್ಧ ಪ್ರಾರಂಭವಾದಾಗ, ಪಾಕಿಸ್ತಾನಿಗಳು ನಮಗೆ ಮಾಧುರಿ ದೀಕ್ಷಿತ್ ಅವರನ್ನು ಕೊಟ್ಟರೆ ನಾವು ಕಾಶ್ಮೀರ ಬಿಡುತ್ತೇವೆ ಎಂದು ಹೇಳಿದ್ದರಂತೆ. ಆಗ ಈ ಸುದ್ದಿ ಭಾರಿ ಸದ್ದು ಮಾಡಿತ್ತು.
ಹಲವು ಬಾಲಿವುಡ್ ನಟ-ನಟಿಯರಂತೆ ಮಾಧುರಿ ದೀಕ್ಷಿತ್ ಅವರಿಗೆ ಭಾರತ ಮಾತ್ರವಲ್ಲದೇ ಪಾಕಿಸ್ತಾನದಲ್ಲಿಯೂ ಅಪಾರ ಅಭಿಮಾನಿಗಳು ಇದ್ದಾರೆ. ಪಾಕಿಗಳ ಈ ಬೇಡಿಕೆಯೇ ಇದಕ್ಕೆ ಸಾಕ್ಷಿ. ಮಾಧುರಿ ಜೊತೆ ರವಿನಾ ಟಂಡನ್ ಅವರಿಗೂ ಪಾಕಿಸ್ತಾನ ಬೇಡಿಕೆ ಇಟ್ಟಿತ್ತು.