ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಮರಣದ ವಿಚಾರವಾಗಿ ರಿಷಬ್ ಶೆಟ್ಟಿ ವಿರುದ್ಧ ಭಾರಿ ಆಕ್ರೋಶ ಕೇಳಿ ಬರುತ್ತಿದೆ.
ತನ್ನ ಚಿತ್ರತಂಡದ ಕಲಾವಿದನ ಅಂತಿಮ ದರ್ಶನ ಪಡೆಯಲು ಆಗಮಿಸದ ನಟನ ಬಗ್ಗೆ ನೆಟ್ಟಿಗರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಳ್ತಿದ್ದಾರೆ.
ಉಡುಪಿಯ ಬೈಂದೂರಿನಲ್ಲಿ ಕಾಂತಾರ ಚಾಪ್ಟರ್ 1 ಚಿತ್ರೀಕರಣ ನಡೆಯುತ್ತಿದೆ. ಹೀಗಿದ್ದರೂ ಕೂಡಾ ರಾಕೇಶ್ ನ ಉಡುಪಿಯ ನಿವಾಸಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಹೀಗಾಗಿ 500 ಕಿಮಿ ದೂರದಿಂದ ಬಂದವರ ನಡುವೆ 30 ಕಿಮಿ ದೂರದಲ್ಲಿದ್ದು ಬರಲು ಬಿಡುವು ಇಲ್ಲವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ರಕ್ಷಿತಾ ಪ್ರೇಮ್, ಯೋಗರಾಜ್ ಭಟ್, ಮಾಸ್ಟರ್ ಆನಂದ್, ಅನುಶ್ರೀ ಸೇರಿದಂತೆ ಅನೇಕರು ಬಂದು ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದಿದ್ದರು. ಉಡುಪಿಯ ಬೈಂದೂರು ಸಮೀಪವಿದ್ದರೂ ರಿಷಬ್ ಶೆಟ್ಟಿ ಮಾತ್ರ ಅಂತಿಮ ದರ್ಶನಕ್ಕೆ ಆಗಮಿಸಿಲ್ಲ.