ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಜೇವರ್‌ನಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದು ಭಾರತದ ಆರನೇ ಘಟಕವಾಗಿದೆ.
ಇದು ಎಚ್‌ಸಿಎಲ್ ಮತ್ತು ಫಾಕ್ಸ್‌ಕಾನ್ ಜಂಟಿ ಉದ್ಯಮವಾಗಿದ್ದು, ಜೆವರ್ ವಿಮಾನ ನಿಲ್ದಾಣದ ಬಳಿ ಸ್ಥಾಪನೆಯಾಗಲಿದೆ. ಉತ್ಪಾದನೆ 2027 ರಿಂದ ಆರಂಭವಾಗಲಿದೆ.
ಎಚ್‌ಸಿಎಲ್ ಹಾರ್ಡ್‌ವೇರ್ ಅಭಿವೃದ್ಧಿಪಡಿಸುವ ಮತ್ತು ತಯಾರಿಸುವ ದೀರ್ಘ ಇತಿಹಾಸವನ್ನು ಹೊಂದಿದೆ. ಫಾಕ್ಸ್‌ಕಾನ್ ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಜಾಗತಿಕವಾಗಿ ಪ್ರಮುಖವಾಗಿದೆ. ಒಟ್ಟಾಗಿ ಅವರು ಯಮುನಾ ಎಕ್ಸ್‌ಪ್ರೆಸ್‌ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಅಥವಾ ಯೆಐಡಿಎಯಲ್ಲಿ ಜೇವರ್ ವಿಮಾನ ನಿಲ್ದಾಣದ ಬಳಿ ಒಂದು ಸ್ಥಾವರವನ್ನು ಸ್ಥಾಪಿಸಲಿದ್ದಾರೆ. ಚಿಪ್ ಘಟಕವು 3,700 ಕೋಟಿ ರೂ. ಮೌಲ್ಯದ ಹೂಡಿಕೆಯನ್ನು ಆಕರ್ಷಿಸಲಿದೆ.
ಇತರ ಐದು ಘಟಕಗಳ ಕಾಮಗಾರಿಗಳು ಪ್ರಸ್ತುತ ನಡೆಯುತ್ತಿದ್ದು, ಈ ವರ್ಷದ ಕೊನೆಯಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕ್ಯಾನಿನೆಟ್ ಸಭೆಯ ನಂತರ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.