ಹೊಸದಿಗಂತ ಡಿಜಿಟಲ್ ಡೆಸ್ಕ್:
ಏ.22ರಂದು ಪಹಲ್ಗಾಮ್ ದಾಳಿಯಾದ ನಂತರದಿಂದ ಮೇ12ರವರೆಗೆ ಮೋದಿ ಎಲ್ಲಿಗೆ ಹೋಗಿದ್ರು? ಈ ವಿಚಾರವನ್ನು ಮೊದಲು ಬಹಿರಂಗಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ವಿರಾಮ ಘೋಷಣೆ ಬಳಿಕ ಅದಮ್ಪುರ ಸೇನಾ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ, ನಮ್ಮ ಸೈನಿಕರಿಗೆ ನೈತಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆದರೆ ಮೋದಿ ಹಲವು ಪ್ರಶ್ನೆಗಳಿಗೆ ಇಲ್ಲಿಯವರೆಗೂ ಉತ್ತರಿಸಿಲ್ಲ. ಏ.22ರಂದು ಪಹಲ್ಗಾಮ್ ದಾಳಿಯಾದ ನಂತರದಿಂದ ಮೋದಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಟ್ರಂಪ್ ಯುದ್ಧ ವಿರಾಮ ಘೋಷಣೆ ಮಾಡಿದ ಬಳಿಕ ಮೇ 12ರಂದು ಪ್ರಧಾನಿ ಮೋದಿ ಮನ್ ಕೀ ಬಾತ್ನಲ್ಲಿ ಕಾಣಿಸಿಕೊಂಡರು. ಹಾಗಿದ್ರೆ ಅಲ್ಲಿಯವರೆಗೂ ಪ್ರಧಾನಿ ಮೋದಿ ಎಲ್ಲಿಗೆ ಹೋಗಿದ್ದರು? ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.