ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದಲ್ಲಿ ಪಾಪಿ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ಟರ್ಕಿ ಗೆ ತಕ್ಕಪಾಠ ಕಲಿಸಲು ಭಾರತ ನಿರ್ಧರಿಸಿದೆ. ಟರ್ಕಿ ಗೆ ಬ್ಯಾನ್ ಬಿಸಿ ಮುಟ್ಟಿಸಲು ಭಾರತೀಯ ಚಿತ್ರರಂಗ ಕೂಡ ತೀರ್ಮಾನಿಸಿದೆ.
ಈಗಾಗಲೇ ಟರ್ಕಿ ದೇಶಗಳಿಗೆ ಪ್ರವಾಸಕ್ಕೆ ತೆರಳಬೇಕು ಎಂದು ನಿರ್ಧರಿಸಿದ್ದ ಲಕ್ಷಾಂತರ ಜನರು ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಚಿತ್ರರಂಗದವರು ಕೂಡ ಕ್ರಮಕ್ಕೆ ಮುಂದಾಗಿದ್ದಾರೆ.
‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್’ (FWICE) ಕಡೆಯಿಂದ ಭಾರತೀಯ ಚಿತ್ರರಂಗದ ನಿರ್ಮಾಪಕರಿಗೆ ಪತ್ರ ಬರೆಯಲಾಗಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿ ಜೊತೆ ಚಿತ್ರರಂಗದವರು ಯಾವುದೇ ನಂಟು ಇಟ್ಟುಕೊಳ್ಳುವುದು ಬೇಡ. ಟರ್ಕಿಯಲ್ಲಿ ಸಿನಿಮಾದ ಶೂಟಿಂಗ್ ಮಾಡುವುದು ಬೇಡ ಎಂದು ಒತ್ತಾಯಿಸಲಾಗಿದೆ.
ಸಿನಿಮಾಗಿಂತಲೂ ದೇಶವೇ ಮುಖ್ಯ. ಟರ್ಕಿಯ ಜೊತೆ ಚಿತ್ರರಂಗ ನಂಟು ಇಟ್ಟುಕೊಂಡರೆ ಇದರಿಂದ ಭಾರತದ ಭದ್ರತೆ ತೊಂದರೆ ಆಗುತ್ತದೆ. ಈ ಸಂದರ್ಭದಲ್ಲಿ ಟರ್ಕಿಯನ್ನು ಬಹಿಷ್ಕರಿಸಬೇಕು ಎಂದು ಎಲ್ಲ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ಕಲಾವಿದರಿಗೆ ಒತ್ತಾಯಿಸುತ್ತೇವೆ’ ಎಂದು FWICE ಪತ್ರ ಬರೆದಿದೆ.
ಈಗಾಗಲೇ ಪಾಕ್ ಕಲಾವಿದರನ್ನು ಹಾಗೂ ತಂತ್ರಜ್ಞರನ್ನು ಭಾರತೀಯ ಚಿತ್ರರಂಗದಿಂದ ಹೊರಗೆ ಇಡಲಾಗಿದೆ.