BIG UPDATE | ಪಾಪಿ ಪಾಕ್ ನ ಕಪಿಮುಷ್ಟಿಯಿಂದ ಬಲೂಚಿಸ್ತಾನಕ್ಕೆ ಸಿಕ್ತು ಮುಕ್ತಿ.. Balochistan independence!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಕಪಿಮುಷ್ಟಿಯಿಂದ ಮುಕ್ತರಾಗಲು ಹೋರಾಡ್ತಿರುವ ಬಲೂಚಿಸ್ತಾನಕ್ಕೆ ಕಡೆಗೂ ಸ್ವಾತಂತ್ರ್ಯ ಸಿಕ್ಕಿದೆ. ನಾವು ಪಾಕಿಸ್ತಾನದಿಂದ ಪ್ರತ್ಯೇಕವಾಗಿದ್ದೇವೆ ಎಂದು ಬಲೂಚಿಸ್ತಾನದ ನಾಯಕರು ಘೋಷಣೆ ಮಾಡಿದ್ದು, ಸ್ವಾತಂತ್ರ್ಯ ಘೋಷಿಸಿಕೊಂಡಿದೆ.

ಬಲೂಚಿಸ್ತಾನ ಸ್ವಾತಂತ್ರ್ಯ ಘೋಷಣೆ ಮಾಡಿದ ಬೆನ್ನಲ್ಲೇ ‘ರಿಪಬ್ಲಿಕ್ ಬಲೂಚಿಸ್ತಾನ’ ಎಂದು ನಾಯಕರು ನಾಮಕರಣ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸ್ವತಂತ್ರ ಬಲೂಚಿಸ್ತಾನವನ್ನು ಭಾರತ ಮತ್ತು ವಿಶ್ವಸಂಸ್ಥೆ ನಮ್ಮನ್ನು ಗುರುತಿಸಿ ಮಾನ್ಯತೆ ನೀಡಬೇಕೆಂದು ಮನವಿ ಮಾಡಿಕೊಂಡಿದೆ.

ಇನ್ನು ಸ್ವಾತಂತ್ರ್ಯ ಘೋಷಿಸಿಕೊಂಡ ಬೆನ್ನಲ್ಲೇ ಬಲೂಚಿಸ್ತಾನ ನಾಯಕರು ನಯಾ ಬಲೂಚ್ ನಕ್ಷೆ, ಧ್ವಜವನ್ನು ಪ್ರದರ್ಶಿಸಿದ್ದಾರೆ.

ಅಷ್ಟು ಮಾತ್ರವಲ್ಲದೆ ಪಾಕ್ ವಿರುದ್ಧ ಅಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ನಮ್ಮ ಬೆಂಬಲ ಇದೆ. ನರೇಂದ್ರ ಮೋದಿ ಅವರೇ ನೀವು ಏಕಾಂಗಿಯಲ್ಲ, ನಿಮ್ಮ ಹಿಂದೆ ಬಲೂಚಿಸ್ತಾನದ 60 6 ಕೋಟಿ ಜನರಿದ್ದಾರೆ ಎಂದು ನಾಯಕರು ಅಭಯ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!