ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢ-ತೆಲಂಗಾಣ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 31 ನಕ್ಸಲರನ್ನು ಹೊಡೆದುರುಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ನಕ್ಸಲ್ ಮುಕ್ತ ಭಾರತ ಕಾರ್ಯಾಚರಣೆಯಲ್ಲಿ ಇದು ಐತಿಹಾಸಿಕ ಸಾಧನೆ . ಒಂದು ಕಾಲದಲ್ಲಿ ಕೆಂಪು ಉಗ್ರರಿಂದ ಆಳಲ್ಪಟ್ಟಿದ್ದ ಕರೆಗುಟ್ಟಾದಲ್ಲಿ ಭದ್ರತಾ ಪಡೆ ಅತಿದೊಡ್ಡ ಕಾರ್ಯಾಚರಣೆ ನಡೆಸಿದ್ದು, ಈಗ ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಾರಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರೆಗುಟ್ಟಾ ಬೆಟ್ಟವು PLGA ಬೆಟಾಲಿಯನ್ 1, DKSZC, TSC ಮತ್ತು CRC ನಂತಹ ಪ್ರಮುಖ ನಕ್ಸಲ್ ಸಂಘಟನೆಗಳ ಪ್ರಧಾನ ಕಚೇರಿಯಾಗಿತ್ತು. ಅಲ್ಲಿ ನಕ್ಸಲ್ ತರಬೇತಿ, ತಂತ್ರ ಮತ್ತು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು. ಕೇವಲ 21 ದಿನಗಳ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿಗೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಿಳಿಸಿದರು.
https://x.com/AmitShah/status/1922626392581173348
ಪ್ರತಿಕೂಲ ಹವಾಮಾನ ಮತ್ತು ಸವಾಲಿನ ಗುಡ್ಡಗಾಡು ಪ್ರದೇಶದ ಹೊರತಾಗಿಯೂ ಧೈರ್ಯ ಮತ್ತು ಶೌರ್ಯದಿಂದ ನಕ್ಸಲರನ್ನು ಎದುರಿಸಿದ ಧೈರ್ಯಶಾಲಿ CRPF, STF, and DRG ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ. ಇಡೀ ರಾಷ್ಟ್ರವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಮುಂದಿನ ವರ್ಷ ಮಾರ್ಚ್ 31ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ನಕ್ಸಲ್ ಮುಕ್ತವಾಗಲಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ, ಭಯೋತ್ಪಾದನೆಯನ್ನು ಅದರ ಬೇರು ಸಮೇತ ನಿರ್ಮೂಲನೆ ಮಾಡಲು ನಾವು ಬದ್ಧರಾಗಿದ್ದೇವೆ. 2026ರ ಮಾರ್ಚ್ 31ರ ವೇಳೆಗೆ ನಕ್ಸಲ್ ಮುಕ್ತ ಭಾರತ ಖಚಿತ ಎಂದು ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ ಎಂದು ಅಮಿತ್ ಶಾ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಮದ್ದುಗುಂಡುಗಳು, ಡಿಟೋನೇಟರ್ಗಳು ಮತ್ತು ಸ್ಫೋಟಕ ಸಾಧನಗಳು, ಔಷಧ ಮತ್ತು ವಿದ್ಯುತ್ ಉಪಕರಣಗಳಂತಹ 12,000 ಕೆಜಿ ಇತರ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ 450 ಐಇಡಿಗಳು ಮತ್ತು 40 ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಹತ್ಯೆಗೈದ 31 ನಕ್ಸಲರ ಪೈಕಿ 28 ಮಂದಿಯನ್ನು ಗುರುತಿಸಲಾಗಿದೆ ಎಂದು ಸಿಆರ್ಪಿಎಫ್ ಮುಖ್ಯಸ್ಥ ಜನರಲ್ ಜಿಪಿ ಸಿಂಗ್ ತಿಳಿಸಿದ್ದಾರೆ. ಇ