ಇಂದಿನ ಕಾಲದಲ್ಲಿ ಮನೆಯ ಸುರಕ್ಷತೆ ಅತ್ಯಂತ ಮುಖ್ಯವಾದ ವಿಚಾರವಾಗಿದೆ. ವಿಶೇಷವಾಗಿ ಒಂಟಿಯಾಗಿ ವಾಸಿಸುವ ಮಹಿಳೆಯರು ಅಥವಾ ವಯೋವೃದ್ಧರಿರುವ ಮನೆ. ತಾಂತ್ರಿಕ ಸಾಧನೆಗಳು, ಚಾಕಚಕ್ಯತೆ ಮತ್ತು ನಿಗಾ ವ್ಯವಸ್ಥೆಗಳ ಬಳಕೆಯಿಂದ ನಾವು ಮನೆಗಳನ್ನು ಹೆಚ್ಚು ಸುರಕ್ಷಿತವಾಗಿಸಬಹುದು.
ಭದ್ರತೆಯ ಬೀಗಗಳು ಮತ್ತು ಗೇಟುಗಳು:
ಬಾಗಿಲುಗಳು ಮತ್ತು ಕಿಟಕಿಗಳ ಮೇಲೆ ಗಟ್ಟಿ, ಆಧುನಿಕ ಬೀಗಗಳನ್ನು ಬಳಸುವುದು ಬಹುಮುಖ್ಯ. ಡಿಜಿಟಲ್ ಲಾಕ್‌ಗಳಿರುವ ಬಾಗಿಲುಗಳು ಹೆಚ್ಚಿನ ಭದ್ರತೆಯನ್ನು ಒದಗಿಸುತ್ತವೆ. ಮುಖ್ಯವಾಗಿ ಗೇಟಿಗೆ ಸ್ಟೀಲ್ ಅಥವಾ ಐರನ್‌ನಿಂದ ಮಾಡಲಾದ ಬಿಗಿಯಾದ ಗೇಟು ಇರಲಿ.
ಸಿಸಿಟಿವಿ ಮತ್ತು ಡೋರ್‌ಬೆಲ್ ಕ್ಯಾಮೆರಾ ಸ್ಥಾಪನೆ:
ಮನೆಗೆ ಬರುವವಾರ ಮೇಲೆ ನಿಗಾ ವಹಿಸಲು ಡಿಜಿಟಲ್ ಡೋರ್‌ಬೆಲ್ ಕ್ಯಾಮೆರಾ ಅಥವಾ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಇದರಿಂದ ಅಪರಿಚಿತ ವ್ಯಕ್ತಿಗಳ ಚಟುವಟಿಕೆಯನ್ನು ನೋಡಬಹುದು.
ನೆರೆಯವರ ಜೊತೆ ಉತ್ತಮ ಸಂಪರ್ಕ:
ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವುದು ಅನಿವಾರ್ಯ. ಯಾವುದಾದರೂ ಅನುಮಾನಾಸ್ಪದ ಘಟನೆ ನಡೆದರೆ ನೆರೆ ಹೊರೆಯವರು ಕೂಡ ನೆರವಾಗಬಲ್ಲರು.
ತುರ್ತು ಸಂಖ್ಯೆ ಮತ್ತು ಆ್ಯಪ್‌ಗಳ ಬಳಕೆ:
ಮೊಬೈಲ್‌ನಲ್ಲಿ ಪೊಲೀಸ್ ಕಂಟ್ರೋಲ್ ರೂಮ್, ಆಂಬ್ಯುಲೆನ್ಸ್ ಮುಂತಾದ ತುರ್ತು ಸಂಖ್ಯೆಗಳಿರುವ ನಂಬರ್ ಗಳನ್ನೂ ಸೇವ್ ಮಾಡಬೇಕು. ಜೊತೆಗೆ ‘ಅಭಯ’, ‘1090’, ಅಥವಾ ಇತರ ಮಹಿಳಾ ಭದ್ರತಾ ಆ್ಯಪ್‌ಗಳನ್ನು ಬಳಸಬಹುದು.
ಮನೆಯೊಳಗಿನ ಸರಳ ಸುರಕ್ಷತಾ ಕ್ರಮಗಳು:
ಬಾಗಿಲ ಸಂದಿಗಳಲ್ಲಿ ದಪ್ಪ ಹಾಸು ಹಾಕುವುದು, ಹಿಡಿಕೋಲುಗಳನ್ನೂ ಇಡುವುದು, ರಾತ್ರಿಗೆ ಸಾಕಷ್ಟು ಬೆಳಕು ಬರುವಂತೆ ಬಲ್ಬ್ ಗಳನ್ನು ಅಳವಡಿಸುವುದು ಮುಂತಾದ ಸರಳ ಕ್ರಮಗಳು ಕೂಡ ಬಿಗಿಯಾದ ಭದ್ರತೆ ನೀಡುತ್ತವೆ.
ಇವುಗಳನ್ನು ಅನುಸರಿಸುವ ಮೂಲಕ ಒಂಟಿ ಮಹಿಳೆಯರು ಅಥವಾ ಹಿರಿಯ ನಾಗರಿಕರು ತಮ್ಮ ಮನೆಗಳನ್ನು ಹೆಚ್ಚು ಸುರಕ್ಷಿತವಾಗಿ ಇರಿಸಿಕೊಳ್ಳಬಹುದು. ನಿಮ್ಮ ಭದ್ರತೆ ನಿಮ್ಮ ಕೈಯಲ್ಲಿದೆ ಎಂಬ ಅರಿವಿನೊಂದಿಗೆ ಸಜ್ಜಾಗುವುದು ಮುಖ್ಯ.